ಬ್ರಹ್ಮಾವರ; ಎಕ್ತಾ ಇವೆಂಟ್ ಮ್ಯಾನೇಜ್ಮೆಂಟ್ ಮತ್ತು ಕಲ್ಯಾಣಿ ಸ್ಪೋರ್ಟ್ಸ್ ರವರ ಜಂಟಿ ಆಶ್ರಯದಲ್ಲಿ ಹಾಗೂ ಸಮಾಜ ಸೇವಕರು ಆಗಿರುವ ಶ್ರೀಯುತ ಅಮೃತ್ ಶೆಣೈಯವರ ಮುಂದಾಳತ್ವದಲ್ಲಿ ಜನವರಿ 20 ರಂದು ಬ್ರಹ್ಮಾವರದ ಹೃದಯ ಭಾಗದಲ್ಲಿ “ಬಿ ಹೆಲ್ತಿ” ಎಂಬ, ಜನಸಾಮಾನ್ಯರಲ್ಲಿ ಆರೋಗ್ಯ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಬೃಹತ್ ಮಟ್ಟದ ಮ್ಯಾರಥಾನ್ ನಡೆಯಲಿದೆ.
ಈ ಪ್ರಯುಕ್ತ ಬಾರ್ಕೂರಿನ ಯಡ್ತಾಡಿಯಲ್ಲಿ ಬಡ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿರುವ ಜರ್ಮನಿಯ ಪ್ರಜೆಗಳಾದ ಮಿಸ್ ರೂಥ್ ಹಾಗೂ ಮಿಸ್ ದೇಸಿರಿ ಮ್ಯಾರಥಾನ್ “ಬಿ ಹೆಲ್ತಿ” ಬ್ರಹ್ಮಾವರದಲ್ಲಿ ಓಟಗಾರರಾಗಿ ಸ್ಪರ್ಧಿಸಲು ತಮ್ಮ ಹೆಸರನ್ನು ನೋಂದಯಿಸಿದರು . ಈ ಸಂದರ್ಭದಲ್ಲಿ ಆಯೋಜಕರಾದ ಖಲೀಲ್ ಕೆರಾಡಿ, ಸುನೀಲ್ ಕುಮಾರ್, ಉಮೇಶ್ ಪೂಜಾರಿ, ಮುಶಾಹೀದ್ ಕಲ್ಮಾಡಿ ಹಾಗೂ ಪ್ರಶಾಂತ್ ರವರು ಉಪಸ್ಥಿತರಿದ್ದರು.