ಉಡುಪಿ:ವಿವಿಧ ಹಂತದ ಶೈಕ್ಷಣಿಕ ತರಬೇತಿ ನೀಡುವುದರಲ್ಲಿ ಉಡುಪಿ ಮತ್ತು ಬ್ರಹ್ಮಾವರದಲ್ಲಿ ಹೆಸರುವಾಸಿಯಾಗಿರುವ ಏಸ್ ಸಂಸ್ಥೆಯಲ್ಲಿ ಅಧ್ಯಯನ ನಡೆಸುತ್ತಿರುವ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಆನ್ಲೈನ್ ತರಬೇತಿಯನ್ನು ಆರಂಭಿಸಲಾಗಿದೆ.
ಒಂಭತ್ತನೇ ತರಗತಿ ಎಸೆಸ್ಸೆಲ್ಸಿ, ಪಿಯುಸಿ, ಸಿಯುಟಿ, ಜೆಇಇ ಮೇನ್ಸ್ ಹಾಗೂ ನೀಟ್ ಪರೀಕ್ಷೆಗಳಿಗೆ ಉತ್ಕ್ರಷ್ಟ ಗುಣಮಟ್ಟದ ಅನ್ಲೈನ್ ತರಬೇತಿಯನ್ನು ಏಸ್ ಸಂಸ್ಥೆಯ ಆಯೋಜಿಸಿದೆ.
ಪರೀಕ್ಷೆಗಳಿಗೆ ಸಿದ್ದತೆ:ಉತ್ಕೃಷ್ಟ ತರಬೇತಿಗೆ ಆದ್ಯತೆ:
ಪ್ರಥಮ ಪಿಯುಸಿ ಪೂರೈಸಿ ದ್ವಿತೀಯ ಪಿಯುಸಿಗೆ ಪಾದಾರ್ಪಣೆಗೈಯುತ್ತಿರುವ ವಿದ್ಯಾರ್ಥಿಗಳಿಗೆ ಮೇ 25 ತಾರೀಖಿನಿಂದ ಜೆಇಇ ಮತ್ತು ನೀಟ್ ತರಬೇತಿಯನ್ನು ಆನ್ಲೈನ್ ಮೂಲಕ ಹಮ್ಮಿಕೊಳ್ಳಲಾಗುತ್ತಿದೆ. ಒಂಭತ್ತನೇ ತರಗತಿಯ ವಿದ್ಯಾರ್ಥಿಗಳಿಗೂ ಕೂಡಾ ಜೂನ್ ಮೊದಲ ವಾರದಲ್ಲಿ ಆನ್ಲೈನ್ ತರಬೇತಿ ಆರಂಭವಾಗಲಿದೆ.
ಜುಲೈ ಅಂತ್ಯದಲ್ಲಿ ಸಿಯಿಟಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಆನ್ಲೈನ್ ಸಿಯಿಟಿ ಕ್ರಾಶ್ ಕೋರ್ಸ್ ತರಬೇತಿಯನ್ನು ಜೂನ್ ಮೊದಲ ವಾರದಿಂದ ನಡೆಸಲಾಗುವುದು. ಸಂಸ್ಥೆಯಲ್ಲಿ 2019ರಲ್ಲಿ ಜೆಇಇ, ನೀಟ್ ಹಾಗೂ ಸಿಯಿಟಿಗೆ ದಾಖಲಾಗಿ ತರಬೇತಿಯಲ್ಲಿ ಪಾಲ್ಗೊಂಡು ಇದೇ ಬರುವ ಜುಲೈನಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಮೇ 21 ರಿಂದ ಅನ್ಲೈನ್ ಮೂಲಕ ತರಬೇತಿಯನ್ನು ಮುಂದುವರಿಸಲಾಗುವುದು.
ತರಬೇತಿಗಳಿಗಾಗಿ ಇಲ್ಲಿ ಸಂಪರ್ಕಿಸಿ:
ಈಗಾಗಲೇ ಏಸ್ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ನಾಡಿನ ಪ್ರಸಿದ್ದ ವೈದ್ಯಕೀಯ ಹಾಗೂ ಇಂಜಿನಿಯರ್ ಕಾಲೇಜುಗಳಲ್ಲಿ ಅಧ್ಯಯನ ನಡೆಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಉಡುಪಿ ತೆಂಕುಪೇಟೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಮುಂಭಾಗದಲ್ಲಿರುವ ಏಸ್ ಸಂಸ್ಥೆಯನ್ನು ಹಾಗೂ ಬ್ರಹ್ಮಾವರದ ಮಧುವನ ಕಾಂಪ್ಲೆಕ್ಸನ ಏಸ್ ಕಛೇರಿಯನ್ನು ಸಂಪರ್ಕಿಸಬೇಕೆಂದು (0820-4299111) ಸಂಸ್ಥೆಯ ನಿರ್ದೇಶಕ ಪಿ. ಲಾತವ್ಯ ಆಚಾರ್ಯ ಹಾಗೂ ಆಕ್ಷೋಭ್ಯ ಆಚಾರ್ಯ ತಿಳಿಸಿದ್ದಾರೆ.