ಕರೋನ ವಿರುದ್ಧ ಹೋರಾಟ ಮಾಡುತ್ತಿರುವ ಕರೋನ ವಾರಿಯರ್ಸ್ಗೆ ಬೆಂಬಲ ದೇಶದಾದ್ಯಂತ ವ್ಯಕ್ತವಾಗುತ್ತಿದೆ. ಈ ನಡುವೆ ಇಲ್ಲೊಬ್ಬಳು ಯುವತಿ ಕರ್ನಾಟಕದಿಂದ ಆಯ್ಕೆ ಯಾದ ಏಕೈಕ ಗಗನಸಖಿಯಾಗಿ ಹುಬ್ಬೇರಿಸುವಂತೆ ಮಾಡಿದ್ದಾಳೆ.ಅದೂ ಅಲ್ಲದೇ ಈ ಹುಡುಗಿ ನಮ್ಮ ಕುಡ್ಲದ ಬೆಡಗಿ
ಹೌದು. ನೂರು ಮಂದಿ ಗಗನ ಸಖಿಯರ ಪೈಕಿ ರಾಜ್ಯದಿಂದ ಆಯ್ಕೆಯಾದ ಏಕೈಕ ಕರೋನ ವಾರಿಯರ್ ಆಗಿ ಮಂಗಳೂರಿನ ಅಶ್ಚಿನಿ ಕೊಣಾಜೆ ಅಚ್ಚರಿ ಮೂಡಿಸಿದ್ದಾರೆ.
ಕರೋನ ವಿರುದ್ಧ ಹೋರಾಟದಲ್ಲಿ ವಿದೇಶಗಳಲ್ಲಿ ಸಿಲುಕಿಕೊಂಡ ಭಾರತೀಯರನ್ನು ರಕ್ಷಿಸುವ ಸಲುವಾಗಿ ಕೇಂದ್ರ ಸರಕಾರ , ಏರ್ಲಿಪ್ಟ್ ಮಾಡುವ ಉದ್ದೇಶದಿಂದ ವಂದೆ ಭಾರತ್ ಮಿಷನ್ ಕಾರ್ಯಕ್ರಮದಡಿ ಅನಿವಾಸಿ ಭಾರತೀಯ ಕರೆತರುವ ಪ್ರಯತ್ನದಲ್ಲಿ ಕರ್ನಾಟಕದಿಂದ ನಾಲ್ಕು ಗಗನ ಸಖಿಯರ ಪೈಕಿ ಮಂಗಳೂರಿನ ಅಶ್ವಿನಿ ಕೊಣಾಜೆ ಅಯ್ಕೆಯಾಗುರುವ ಮೂಲಕ ಕರುನಾಡ ಜನರಲ್ಲಿ ಮತ್ತು ಕರಾವಳಿಗರಲ್ಲಿ ಹೆಮ್ಮೆ ಮೂಡಿಸಿದ್ದಾರೆ.
ಭಾರತದಲ್ಲಿ ಸಿಲುಕಿಕೊಂಡಿದ್ದ ಸಿಂಗಾಪುರದ 91 ಪ್ರಯಾಣಿಕರನ್ನು ಏರ್ ಇಂಡಿಯಾ ವಿಮಾನದ ಮೂಲಕ ದೇವನಹಳ್ಳಿ ವಿಮಾನ ನಿಲ್ದಾಣ ದಿಂದ ಸಿಂಗಪುರ ಕ್ಕೆ ಕಳುಹಿಸಲಾಗಿತ್ತು. ಸಿಂಗಾಪುರದಲ್ಲಿ 152 ಪ್ರಯಾಣಿಕರನ್ನು ಕರೆತರುವಲ್ಲಿ ಮುಖ್ಯ ಪಾತ್ರ ವಹಿಸಿದ್ದವರು ಕರಾವಳಿಯ ಗಗನ ಸಖಿ ಅಶ್ವಿನಿ ಕೊಣಾಜೆ.
ಬಡ ಕುಟುಂಬದಲ್ಲಿ ಜನಿಸಿದ ಅಶ್ವಿನಿ, ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದವರು, ಉತ್ತಮ ಭಾಷಣ ಕಲೆ, ರಂಗಭೂಮಿ, ಕಿರುತೆರೆ ಮೂಲಕ ಮಿಂಚಿದವರು. ಇಂದು ಕರೋನ ವಾರಿಯರ್ ಆಗಿ ಗುರುತಿಸಿ ಕೊಂಡಿದ್ದಾರೆ
-ರಾಮ್ ಅಜೆಕಾರು ಕಾರ್ಕಳ