ಉಡುಪಿ: ವಿಪರೀತ ಮದ್ಯಸೇವನೆಯಿಂದ ಅಪರಿಚಿತ ವ್ಯಕ್ತಿಯ ಸಾವು

ಉಡುಪಿ: ಸ್ವರ್ಣ ಅರ್ಕೆಡ್ ಬಳಿ ಪಾದಚಾರಿ ರಸ್ತೆಯಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದ ಅಪರಿಚಿತ ವ್ಯಕ್ತಿ ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟಿದ್ದಾನೆ.
ವಿಪರೀತ ಮದ್ಯಸೇವನೆ ಮಾಡಿ ಅಸ್ವಸ್ಥಗೊಂಡು ರಸ್ತೆಯ ಬಳಿ ಬಿದ್ದಿದ್ದನು. ಈತನನ್ನು ಗುರುವಾರ ಮುಂಜಾನೆ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಆದರೆ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಅತಿಯಾದ ಮದ್ಯಸೇವನೆಯು ಈತನ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ. ಈತನ ವಿಳಾಸ ತಿಳಿದು ಬಂದಿಲ್ಲ. ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿ ಇಡಲಾಗಿದೆ. ವಾರಸುದಾರರು ತುರ್ತು ಅಜ್ಜರಕಾಡು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸವಂತೆ ಒಳಕಾಡು ವಿನಂತಿಸಿದ್ದಾರೆ.