ಉಡುಪಿ ಶ್ರೀ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ವತಿಯಿಂದ ಆಹಾರ ಧಾನ್ಯದ  ವಿತರಣೆ

ಉಡುಪಿ:   ಶ್ರೀ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ವತಿಯಿಂದ, ಮಂತ್ರಾಲಯ ಮಠಾಧೀಶರಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರ ಆದೇಶಾನುಸಾರವಾಗಿ ಉಡುಪಿಯ ರಿಕ್ಷಾಚಾಲಕರು ಹಾಗೂ  ಸುತ್ತ ಮುತ್ತಲಿನ ಅರ್ಹ ಕುಟುಂಬಗಳಿಗೆ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ರಥಬೀದಿಯ ಮಂತ್ರಾಲಯ  ಶಾಖಾ ಮಠದಲ್ಲಿ ರಾಯರ ಪ್ರಸಾದ ರೂಪವಾಗಿ 25 ಕಿಲೋ ಅಕ್ಕಿಯ 100 ಕಿಟ್ ಗಳನ್ನು, ಮತ್ತು ಪಡುಕೆರೆ ಪರಿಸರದಅರ್ಹ 250 ಕುಟುಂಬಗಳಿಗೆ  ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು  25 ಕಿಲೋ ಅಕ್ಕಿಯ  250 ಕಿಟ್ ಗಳನ್ನು ರಾಯರ ಪ್ರಸಾದ ರೂಪವಾಗಿ ವಿತರಿಸಿದರು.


ಈ ಸಂದರ್ಭದಲ್ಲಿ ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಮನೋಹರ ಶೆಟ್ಟಿ, ಅನಿಲ್ ಪೈ,ಅಮರ್ ಪೈ, ಬಡಗು ಬೆಟ್ಟು ಬ್ಯಾಂಕಿನ ಇಂದ್ರಾಳಿ ಜಯಕರ ಶೆಟ್ಟಿ, ಮಾಧವ ಆಚಾರ್ಯ  ಮೊದಲಾದವರು ಉಪಸ್ಥಿತರಿದ್ದು,ಉಡುಪಿ  ಶ್ರೀ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕರಾದ ಜಯತೀರ್ಥ ಆಚಾರ್ಯ ಇವರು ವಿಶೇಷ ಮುತುವರ್ಜಿ ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.