ಗಂಗೊಳ್ಳಿ : ಲಾಕ್ ಡೌನ್ ಹಿನ್ನಲೆಯಲ್ಲಿ ಜನರು ದಿನಿತ್ಯ ಕಷ್ಟಪಡುತ್ತಿರುವ ಇಂದಿನ ದಿನಗಳಲ್ಲಿ ಜಾನುವಾರುಗಳು ಹಾಗೂ ನಾಯಿಗಳು ನೀರು, ಆಹಾರವಿಲ್ಲದೆ ನರಳಬಾರದು ಎಂಬ ಸದುದ್ದೇಶದಿಂದ ಗಂಗೊಳ್ಳಿಯ ನಿನಾದ ಸಂಸ್ಥೆ ಕಾರ್ಯಪ್ರವೃತವಾಗಿದೆ.
ಸಂಸ್ಥೆಯ ಸದಸ್ಯರು ತಮ್ಮದೇ ವಾಹನದಲ್ಲಿ ನೀರು ಮತ್ತು ಆಹಾರದೊಂದಿಗೆ ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳಿ ವಿವಿಧೆಡೆ ರಸ್ತೆ ಬದಿಗಳಲ್ಲಿ ನಿಂತಿಕೊಂಡಿರುವ ಜಾನುವಾರುಗಳು ಮತ್ತು ನಾಯಿಗಳು ಹಾಗೂ ಇನ್ನಿತರ ಪ್ರಾಣಿಪಕ್ಷಿಗಳಿಗೆ ನೀರು, ಆಹಾರ ನೀಡುವ ಕಾರ್ಯ ಮಾಡುತ್ತಿದ್ದಾರೆ. ಮೂಕಪ್ರಾಣಿಗಳು ಲಾಕ್ ಡೌನ್ನಿಂದ ಆಹಾರ, ನೀರು ಸಿಗದೆ ಅಸ್ವಸ್ಥಗೊಳ್ಳಬಾರದು. ಮನುಷ್ಯರಂತೆ ಅವು ಕೂಡ ಸಮಾಜದಲ್ಲಿ ಜೀವಿಸಬೇಕೆನ್ನುವ ಉದ್ದೇಶದಿಂದ ಸಾಧ್ಯವಾದಷ್ಟು ಮಟ್ಟಿಗೆ ಜಾನುವಾರುಗಳು ಹಾಗೂ ಪ್ರಾಣಿಗಳಿಗೆ ಆಹಾರ, ನೀರು ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಸದಸ್ಯರು ತಿಳಿಸಿದ್ದಾರೆ.