ಧನಾತ್ಮಕ ಚಿಂತನೆಯಿಂದ ಜೀವನದಲ್ಲಿ ಧನ್ಯತೆ ಸಿಗುತ್ತದೆ : ಎಸ್. ಗಣೇಶ್ ರಾವ್

ಮಂಗಳೂರು:ವಿದ್ಯಾರ್ಥಿಗಳಲ್ಲಿ ಕ್ರೀಯಾಶೀಲತೆ, ನಾಯಕತ್ವ ಗುಣ ಮೂಡಿಸುವ ನಿಟ್ಟಿನಲ್ಲಿ ಹಾಗೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸವಾಲುಗಳನ್ನು ದಿಟ್ಟವಾಗಿ ಎದುರಿಸಬಲ್ಲ ಸಾಮರ್ಥ್ಯವನ್ನು ಹೆಚ್ಚಿಸುವುದು ಅತೀ ಮುಖ್ಯವಾದ ಕೆಲಸ, ಧನಾತ್ಮಕ ಚಿಂತನೆ, ಮಹೋನ್ನತ ಗುರಿ, ಸಾಧಿಸುವ ಛಲ ಮತ್ತು ಇತರರಿಗೂ ಅನುಕರಣೀಯವಾದ ವ್ಯಕ್ತಿತ್ವದಿಂದ ಜೀವನದಲ್ಲಿ ಧನ್ಯತೆ ಸಾಧ್ಯವಾಗುತ್ತದೆ. ಕರಾವಳಿ ಕಾಲೇಜು ಯುವಜನತೆಗೆ ಯಶಸ್ವಿ ಬದುಕು ಕಟ್ಟಿಕೊಟ್ಟ ಸಂತೃಪ್ತಿಯನ್ನು ತನ್ನದಾಗಿಸಿಕೊಂಡಿದೆ ಎಂದು ಕರಾವಳಿ ಕಾಲೇಜುಗಳ ಸಮೂಹದ ಸ್ಥಾಪಕ ಅಧ್ಯಕ್ಷ ಎಸ್. ಗಣೇಶ್ ರಾವ್ ಹೇಳಿದರು.

ಕರಾವಳಿ ಕಾಲೇಜುಗಳ ಸಮೂಹದ ಸ್ಥಾಪಕ ಅಧ್ಯಕ್ಷ ಎಸ್. ಗಣೇಶ್ ರಾವ್ ಅವರ ಜನ್ಮದಿನದ ಸಂದರ್ಭ ಮಂಗಳವಾರ ಕಾಲೇಜಿನ ಕೊಟ್ಟಾರ ಕ್ಯಾಂಪಸ್ನಲ್ಲಿ ನಲ್ಲಿ ಅಂತರ್ ಕಾಲೇಜು ಸಾಂಸ್ಕೃತಿಕ ಹಬ್ಬ ಕೈಜನ್-2020 ಸ್ಪರ್ಧೆ ಆಯೋಜಿಸಲಾಗಿತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರಾವಳಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮನೋಚಿಂತನೆಗೆ ಸ್ಪೂರ್ತಿ ಕೊಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿಪುಲ ಅವಕಾಶಗಳಿವೆ. ವಿದ್ಯಾರ್ಥಿಗಳು ಹೊಸತನಗಳಿಗೆ ತಮ್ಮನ್ನು ತೆರೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕರಾವಳಿ ಕಾಲೇಜು ಸಮೂಹದ ನಿರ್ದೇಶಕಿ ಲತಾ ಜಿ. ರಾವ್ ಉದ್ಘಾಟಿಸಿದರು. ಕರಾವಳಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಪ್ರೊ| ಆರ್. ಕೆ. ಭಟ್, ಉಪಪ್ರಾಂಶುಪಾಲ ಡಾ| ರಘುಚಂದ್ ಆರ್., ಕರಾವಳಿ ಕಾಲೇಜು ಫಿಜಿಯೋಥೆರಪಿ ಪ್ರಾಂಶುಪಾಲ ಡಾ|ಜಯೇಶ್, ಕರಾವಳಿ ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲ ಪ್ರೋ| ರವಿಕುಮಾರ್, ಕರಾವಳಿ ಕಾಲೇಜಿನ ಪ್ರಾಂಶುಪಾಲ ಮೋಹನ್, ಕರಾವಳಿ ಕಾಲೇಜು ನರ್ಸಿಂಗ್ ನ ಪ್ರಾಂಶುಪಾಲೆ ಮೊಲಿ ಸಲ್ದಾನಾ, ವಿದ್ಯಾರ್ಥಿ ವೆಲ್ಫೇರ್ ಅಧಿಕಾರಿ ಪ್ರೊ| ಜೀಶನ್ ಎಸ್.ಎಂ. ಉಪಸ್ಥಿತರಿದ್ದರು. ಅಪೂರ್ವ ಸ್ವಾಗತಿಸಿ, ರಕ್ಷಾ ವಂದಿಸಿದರು.

ಕೈಜನ್ ಉತ್ಸವದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಧ್ಯಾಹ್ನ ಗಣೇಶ್ ರಾವ್ ಅವರ ಹುಟ್ಟುಹಬ್ಬ ಆಚರಿಸಲಾಯಿತು