ಉಡುಪಿಯ ಛಾಯಾಗ್ರಾಹಕ ಫೋಕಸ್ ರಾಘು ಅವರಿಗೆ ಅಂತರಾಷ್ಟ್ರೀಯ ಗೌರವ:

ಉಡುಪಿ: ವೃತ್ತಿಪರ ಛಾಯಾಗ್ರಾಹಕ, ಉಡುಪಿಯ ಫೋಕಸ್ ರಾಘು ಅವರಿಗೆ 2019 ರ ವಿಶ್ವ ಫೋಟೊಗ್ರಫಿ ವಲಯದಲ್ಲಿ ಪ್ರಾನ್ಸಿನ ಪ್ರತಿಷ್ಠಿತ ಅಂತರರಾಷ್ಟ್ರೀಯ [Federation Internationale de l’ Art Photographique ಫೋಟೊಗ್ರಫಿ ಸಂಸ್ಥೆಯಿಂದ AFIAP Distinction [Artist Federation Internationale de l’ Art Photographique ] ಗೌರವ ದೊರತಿದೆ.

ಕಳೆದ 19 ವರ್ಷಗಳಿಂದ ಹವ್ಯಾಸವಾಗಿ ಪಿಕ್ಟೋರಿಯಲ್, ವನ್ಯಜೀವಿ, ಟ್ರಾವಲ್ ಮತ್ತು ಸ್ಟ್ರೀಟ್ ಛಾಯಾಗ್ರಾಹಣವನ್ನು ಮಾಡುತ್ತಿರುವ ಇವರು  15ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರಶಸ್ತಿಗಳು ಮತ್ತು 50 ಕ್ಕೂ ಹೆಚ್ಚು ರಾಷ್ಟ್ರ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳನ್ನು ಗಳಿಸಿ ಮೂರು ಸಲ ಉಡುಪಿ ಮತ್ತು ಮಣಿಪಾಲದಲ್ಲಿ ರಾಜ್ಯಮಟ್ಟದಲ್ಲಿ  ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಿದ್ದಾರೆ.

ಇದೀಗ ಇವರಿಗೆ ಅಂತರಾಷ್ಟ್ರೀಯ ಗೌರವ ದೊರೆತಿದೆ. ಈ ಗೌರವದ ಹಿನ್ನೆಲೆಯಲ್ಲಿ ಇವರ ಕಲಾತ್ಮಕ ಛಾಯಾಚಿತ್ರಗಳು ಭಾರತ, ಸಿಂಗಪುರ್, ಪ್ರಾನ್ಸ್, ಇಂಗ್ಲೇಂಡ್, ಅಮೇರಿಕ, ಶ್ರೀಲಂಕಾ,ಗ್ರೀಕ್ ,ಕೆನಡಾ ,ಚೀನಾ ಮುಂತಾದ ದೇಶಗಳ ಛಾಯಾಚಿತ್ರ ಸ್ಪರ್ಧೆಗಳಲ್ಲಿ ಆಯ್ಕೆಯಾಗಿದ್ದು ಪ್ರದರ್ಶನಗೊಂಡಿವೆ. ಕಲಾತ್ಮಕ ಪಿಕ್ಟೋರಿಯಲ್ ಛಾಯಾಗ್ರಹಣ ವಿಭಾಗದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಯ್ದ ಛಾಯಾಗ್ರಾಹಕರ ಸಾಧನೆ ಪರಿಗಣಿಸಿ ಈ ಪ್ರತಿಷ್ಠಿತ ಗೌರವವನ್ನು ನೀಡಲಾಗುತ್ತದೆ. ಕರಾವಳಿ ಭಾಗದಲ್ಲಿ ಈ AFIAP Distinction ಪಡೆದ ಮೂರನೇ ಛಾಯಾಗ್ರಾಹಕ ಫೋಕಸ್ ರಾಘು.