ಮಂಗಳೂರು: ಶಿಕ್ಷಣ ವ್ಯವಸ್ಥೆಯಲ್ಲಿ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯಿಂದ ನವಕ್ರಾಂತಿ ನಡೆದಿದೆ.ಇಲ್ಲಿ ಕಲಿಕಾ ವಿಧಾನ ತರಬೇತಿ, ಕ್ರಮಗಳು ವಿದ್ಯಾರ್ಥಿಗಳಿಗೆ ಬಹಳಷ್ಟು ನೆರವಾಗಿದೆ ಎನ್ನುವುದಕ್ಕೆ ಇಲ್ಲಿನ ವಿದ್ಯಾರ್ಥಿಗಳ ಸಾಧನೆಯೇ ಹೇಳುತ್ತಿದೆ ಎಂದು ದಕ್ಷಿಣಕನ್ನಡಜಿಲ್ಲಾ ಪಂಚಾಯತಿ ಸಿಇಒ ಡಾ.ಸೆಲ್ವಮಣಿ ಆರ್ ಹೇಳಿದರು.
ಅವರು ಶುಕ್ರವಾರ ನಗರದ ಭಗವತಿ ದೇವಸ್ಥಾನದ ಕೂಟಕ್ಕಳ ಸಭಾಂಗಣದಲ್ಲಿ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ೩೪ನೇ ವರ್ಷದಎಕ್ಸ್ಪರ್ಟ್ಡೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾತನಾಡುತ್ತ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯು ನಿಡುವತರಬೇತಿ ಮತ್ತು ಶಿಕ್ಷಣ ಕ್ರಮವನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿ ಸಮಾಜದಲ್ಲಿಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು
ಹೇಳಿದರು.
ಎಕ್ಸ್ಪರ್ಟ್ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಭಾರತೀಯ ನೌಕಾಪಡೆ ಲೆಫ್ಟಿನೆಂಟ್ ಸಮರ್ ಜಿ.ಹೊಸೂರು ಅವರು ಮಾತನಾಡುತ್ತ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆ ನನ್ನ ಭವಿಷ್ಯವನ್ನುರೂಪಿಸುವಲ್ಲಿ ಉತ್ತಮವಾದ ತಳಹದಿ ಹಾಕಿದೆ ಹಾಗೂ ಇಲ್ಲಿನ ಬೋಧನಕ್ರಮಗಳು ಪರಿಣಾಮಕಾರಿಯಾಗಿದೆ. ಭವಿಷ್ಯದ ಸವಾಲುಗಳನ್ನು ಎದುರಿಸುವಲ್ಲಿ ಉತ್ತಮ ಆತ್ಮಸ್ಥೈರ್ಯವನ್ನು ಮೂಡಿಸುವಲ್ಲಿ ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆಯ ಪಾತ್ರ ಮಹತ್ತರವಾದದ್ದು ಎಂದು
ಹೇಳಿದರು.
ಆಕ್ಸಿಸ್ ಬ್ಯಾಂಕ್ನ ಹಿರಿಯ ಉಪಾಧ್ಯಕ್ಷರಾದ ಬಿ.ಸದಾಶಿವ ಮಲ್ಯ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಧನಾತ್ಮಕರೀತಿಯಲ್ಲಿ ಸಾಗಿಸಿದಾಗ ಮಾತ್ರಯಶಸ್ಸು ಪಡೆಯಲು ಸಾಧ್ಯ.ಕಠಿಣ ಪರಿಶ್ರಮವನ್ನು ಕಲಿಕೆಯಲ್ಲಿ ಶ್ರದ್ಧೆಯಿಂದ ನಿರ್ವಹಿಸಿದರೆ ಜಯ ಖಂಡಿತವಾಗಿಯೂ ಲಭಿಸುತ್ತದೆ ಎಂದು ಹೇಳಿದರು.
ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾಪ್ರಭಾಎನ್ ನಾಯಕ್ ಅವರು ಮಾತನಾಡಿ ಜೀವನದಲ್ಲಿ ಸದಾ ಕ್ರಿಯಾಶೀಲರಾಗಿದ್ದಾಗ ಸವಾಲುಗಳನ್ನು ಗೆಲ್ಲಲು ಸಾಧ್ಯ.ಗೆಲುವುವನ್ನುಗೆಲ್ಲುವಲ್ಲಿ ನಿರಂತರವಾದಕಠಿಣ ಪರಿಶ್ರಮಅಗತ್ಯ ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮನ್ನುತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜಿನ ಇಡೀ ವರ್ಷದ ಎಲ್ಲಾ ದಿನಾಚರಣೆಗಳಿಗಿಂತ ಅತ್ಯಂತ ಮಹತ್ವಪೂರ್ಣ ಸಂಭ್ರಮಿಸುವ ದಿನವೇ ‘ಎಕ್ಸ್ಪರ್ಟ್ಡೇ’ಕಾರ್ಯಕ್ರಮ.ಕಾರಣ ಎಲ್ಲರೂ ಸಂತೋಷ ಸಂಭ್ರಮದಿಂದ ಸಾಂಸ್ಕೃತಿಕ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ಸಾಹದಿಂದ ತೊಡಗಿಸಿಕೊಳ್ಳುತ್ತಾರೆ ಎಂದುಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಪ್ರೊ. ನರೇಂದ್ರಎಲ್.ನಾಯಕ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಚಂದ್ರ ಭಟ್ ಅವರು ವಾರ್ಷಿಕ ವರದಿಯನ್ನು ಮಂಡಿಸಿದರು.ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯಟ್ರಸ್ಟಿ ಉಸ್ತಾದ್ರಫೀಕ್ಖಾನ್, ಮಾಹಿತಿ ಮತ್ತುತಂತ್ರಜ್ಞಾನ ವಿಭಾಗದ ನಿರ್ದೇಶಕರಾದ ಅಂಕುಶ್ಎನ್.ನಾಯಕ್, ವಾಸ್ತುಶಿಲ್ಪಿ ದೀಪಿಕಾ ಎ.ನಾಯಕ್, ವಳಚ್ಚಿಲ್ ಎಕ್ಸ್ಪರ್ಟ್ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಕೆ ವಿಜಯನ್, ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷೆ ವೃಶಾಲಿಕೆ.ಎಸ್, ವಿದ್ಯಾರ್ಥಿ ಸಂಘದಅಧ್ಯಕ್ಷರೋನೊಲ್ ವಿ ಇತರರು ಉಪಸ್ಥಿತರಿದ್ಧರು.
ರೋಶನಿ ಮತ್ತು ನಿಹಾಲ್ಕಾರ್ಯಕ್ರಮ ನಿರೂಪಿಸಿದರು.ಅನಂತರಎಕ್ಸ್ಪರ್ಟ್ಡೇ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.