ಉಡುಪಿ: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗದ ಪ್ರಾದ್ಯಾಪಕಿಯಾದ ಶ್ರೀಮತಿ ಜೊವಿಟ ರೆಲಶಾ ಲುವಿಸ್ ಇವರು ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಸ್ಕೂಲ್ ಆಫ್ ಕಂಪ್ಯೂಟರ್ ಇಂಜಿನಿಯರಿಂಗ್ ಇದರ ಪ್ರಾಧ್ಯಾಪಕರಾದ ಡಾ. ಸಮೀನಾ ಪಥಾನ್ ಇವರ ಮಾಗ೯ದಶ೯ನದಲ್ಲಿ “ಎಂಡೋಸ್ಕೋಪಿಕ್ ಚಿತ್ರಗಳನ್ನು ಬಳಸಿಕೊಂಡು ಹೆಲಿಕೋಬ್ಯಾಕ್ಟರ್ ಪೈಲೋರಿ ಸೋಂಕಿನ ಸ್ವಯಂಚಾಲಿತ ಪತ್ತೆ ಮತ್ತು ತೀವ್ರತೆಯ ವಿಶ್ಲೇಷಣೆ” ಎಂಬ ಸಂಶೋಧನಾ ಪ್ರಬಂದಕ್ಕೆ ಮಣಿಪಾಲ್ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಇವರ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಸಂಸ್ಥೆಯ ಪ್ರಾಂಶುಪಾಲರಾದ ಡಾ. ನಾಗರಾಜ್ ಭಟ್ ಮತ್ತು ಸಂಸ್ಥೆಯ ಬೋಧಕ – ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿರುತ್ತಾರೆ.















