ಯುವ ಪ್ರತಿಭೆಗಳಿಗೆ ತುಳುಕೂಟದಿಂದ ವೇದಿಕೆ: ಜಯಕರ ಶೆಟ್ಟಿ ಇಂದ್ರಾಳಿ

ಉಡುಪಿ: ತುಳು ಸಂಸ್ಕೃತಿ, ಆಚಾರ-ವಿಚಾರಗಳನ್ನು ಪಸರಿಸುವುದರ ಜತೆಗೆ ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಕಾರ್ಯವನ್ನು ತುಳುಕೂಟ ಉಡುಪಿ ನಿರಂತರವಾಗಿ ಮಾಡುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ತುಳುಕೂಟ ಉಡುಪಿ ವತಿಯಿಂದ ಆಯೋಜಿಸಲಾಗಿರುವ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮಾರಕ ಬೆಳ್ಳಿಹಬ್ಬದ ನಾಟಕ ಪರ್ಬದ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತುಳು ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ತುಳುಕೂಟ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ನಾಟಕ […]
ಕೃಷ್ಣನ ಪೂಜೆಗೆ ಸಿದ್ಧತೆ: ನ. 29ರಂದು ಸೋದೆ ಮಠದ ಬಾಳೆ ಮುಹೂರ್ತ

ಉಡುಪಿ: 2028ರ ಜನವರಿ 18ರಂದು ಪರ್ಯಾಯ ಪೀಠಾರೋಹಣ ಮಾಡಲಿರುವ ಸೋದೆ ಮಠದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರ ಪರ್ಯಾಯೋತ್ಸವದ ಪೂರ್ವಭಾವಿಯಾಗಿ ನವೆಂಬರ್ 29ರಂದು ಬಾಳೆ ಮುಹೂರ್ತ ನಡೆಯಲಿದೆ. ಪರ್ಯಾಯದ ಎರಡು ವರ್ಷಗಳ ಅವಧಿಯಲ್ಲಿ ಶ್ರೀಕೃಷ್ಣನ ಪೂಜೆ, ನೈವೇದ್ಯ ಹಾಗೂ ಭಕ್ತರ ಅನ್ನಸಂತರ್ಪಣೆಗೆ ಅಗತ್ಯವಾದ ಬಾಳೆ ಉತ್ಪಾದನೆಗೆ ಚಾಲನೆ ನೀಡುವ ಈ ಧಾರ್ಮಿಕ ಆಚರಣೆಯೊಂದಿಗೆ ಪರ್ಯಾಯದ ಸಿದ್ಧತೆಗಳು ಆರಂಭಗೊಳ್ಳಲಿವೆ. ಉಡುಪಿಯ ಅಷ್ಟಮಠಗಳ ಯತಿಗಳಿಗೆ ಎರಡು ವರ್ಷಗಳ ಕಾಲ ಶ್ರೀಕೃಷ್ಣನ ಪೂಜೆ ಸಲ್ಲಿಸುವ ಭಾಗ್ಯ ದೊರೆಯುತ್ತದೆ. ಪರ್ಯಾಯ ಪೀಠಾರೋಹಣಕ್ಕೂ ಮುನ್ನ ಬಾಳೆ, ಅಕ್ಕಿ, […]
ಸಾಲಿಗ್ರಾಮದಲ್ಲಿ ಭೀಕರ ಅಪಘಾತ: ಬೆಂಕಿಗಾಹುತಿಯಾದ ಕಾರು

ಉಡುಪಿ: ಕಾರು ಮತ್ತು ರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರೊಂದು ಬೆಂಕಿಗಾಹುತಿಯಾದ ಘಟನೆ ಸಾಲಿಗ್ರಾಮದ ಗುಂಡ್ಮಿ ಸಮೀಪ ಶನಿವಾರ ನಡೆದಿದೆ. ಗೋಕರ್ಣದಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರು ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ವಿಭಜಕವನ್ನು ದಾಟಿ ಚರಂಡಿಗೆ ಬಿದ್ದಿದೆ. ಈ ವೇಳೆ ಕಾರಿನಲ್ಲಿ ಬೆಂಕಿಯ ಕಿಡಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದೆ. ಪರಿಣಾಮ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ […]
ಶ್ರೀಮತಿ ಜೊವಿಟ ರೆಲಶಾ ಲುವಿಸ್ ಅವರಿಗೆ ಪಿ. ಹೆಚ್ಡಿ ಪದವಿ ಪ್ರದಾನ

ಉಡುಪಿ: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗದ ಪ್ರಾದ್ಯಾಪಕಿಯಾದ ಶ್ರೀಮತಿ ಜೊವಿಟ ರೆಲಶಾ ಲುವಿಸ್ ಇವರು ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಸ್ಕೂಲ್ ಆಫ್ ಕಂಪ್ಯೂಟರ್ ಇಂಜಿನಿಯರಿಂಗ್ ಇದರ ಪ್ರಾಧ್ಯಾಪಕರಾದ ಡಾ. ಸಮೀನಾ ಪಥಾನ್ ಇವರ ಮಾಗ೯ದಶ೯ನದಲ್ಲಿ “ಎಂಡೋಸ್ಕೋಪಿಕ್ ಚಿತ್ರಗಳನ್ನು ಬಳಸಿಕೊಂಡು ಹೆಲಿಕೋಬ್ಯಾಕ್ಟರ್ ಪೈಲೋರಿ ಸೋಂಕಿನ ಸ್ವಯಂಚಾಲಿತ ಪತ್ತೆ ಮತ್ತು ತೀವ್ರತೆಯ ವಿಶ್ಲೇಷಣೆ” ಎಂಬ ಸಂಶೋಧನಾ ಪ್ರಬಂದಕ್ಕೆ ಮಣಿಪಾಲ್ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, […]
ಉದ್ಯೋಗಾವಕಾಶ

SBI LIFE INSURANCE ನಲ್ಲಿ SBI LIFE ADVISOR ಹುದ್ದೆಗೆ ಉದ್ಯೋಗಾವಕಾಶ ನಡೆಯುತ್ತಿದೆ. ಆಸಕ್ತರು ಕೂಡಲೇ ಸಂಪರ್ಕಿಸಿ: 9845079798