ಮಣಿಪಾಲ: ಮಣಿಪಾಲದ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (ಎಂಎಸ್ಡಿಸಿ) ಸಂಸ್ಥೆಯಲ್ಲಿ ಹೇರ್ ಟ್ರೈನರ್ ಮತ್ತು ಸ್ಕಿನ್ ಟ್ರೈನರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಬ್ಯೂಟಿ ಮತ್ತು ವೆಲ್ನೆಸ್ ಕ್ಷೇತ್ರದಲ್ಲಿ ಮುಂದಿನ ಪೀಳಿಗೆಯ ವೃತ್ತಿಪರರಿಗೆ ತರಬೇತಿ ನೀಡುವ ಉದ್ದೇಶದಿಂದ ಈ ನೇಮಕಾತಿ ನಡೆಯುತ್ತಿದೆ. ಹೇರ್ ಅಥವಾ ಸ್ಕಿನ್ ಕ್ಷೇತ್ರದಲ್ಲಿ ಸಂಬಂಧಿತ ವೃತ್ತಿಪರ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಸಂಬಂಧಿತ ಉದ್ಯಮದಲ್ಲಿ ಪ್ರಾಯೋಗಿಕ ಅನುಭವ ಹೊಂದಿರಬೇಕು. ಬೋಧನೆ ಮತ್ತು ಮಾರ್ಗದರ್ಶನ ನೀಡುವ ಆಸಕ್ತಿ, ಉತ್ತಮ ಸಂವಹನ ಹಾಗೂ ವ್ಯಕ್ತಿಗಳೊಂದಿಗೆ ಬೆರೆಯುವ ಕೌಶಲ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ನವೀಕೃತ ಸಿವಿಯನ್ನು [email protected] ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 9591427761 ಸಂಖ್ಯೆಯನ್ನು ಸಂಪರ್ಕಿಸಬಹುದು. ವೆಬ್ಸೈಟ್: https://msdcskills.org/beauty-wellness/















