ಮಣಿಪಾಲ: ಮಧುಮೇಹದ ಗಾಯಗಳ ನಿರ್ವಹಣೆಗೆ ಮುನಿಯಾಲ್ ಆಯುರ್ವೇದದಿಂದ ಉಚಿತ ಆರೋಗ್ಯ ಶಿಬಿರ

ಮಣಿಪಾಲ: ಮಧುಮೇಹ ಜಾಗೃತಿ ಮಾಸದ ಅಂಗವಾಗಿ ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಶಲ್ಯತಂತ್ರ ಹಾಗೂ ಸ್ವಸ್ಥವೃತ್ತ ವಿಭಾಗಗಳ ವತಿಯಿಂದ ನವೆಂಬರ್ 23ರಿಂದ 28ರವರೆಗೆ ಮಧುಮೇಹದ ಗಾಯಗಳ ನಿರ್ವಹಣೆಗಾಗಿ ವಿಶೇಷ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಮಣಿಪಾಲದ ಶಿವಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಮುನಿಯಾಲ್ ಆಯುರ್ವೇದ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಶಿಬಿರ ನಡೆಯುತ್ತಿದೆ.

ಶಿಬಿರವನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಬಿ. ಸತ್ಯನಾರಾಯಣ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯ ಆಡಳಿತಾಧಿಕಾರಿ ಯೋಗೀಶ್ ಶೆಟ್ಟಿ, ಶಲ್ಯತಂತ್ರ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ. ಗುರುರಾಜ್ ಡಿ., ಪ್ರಾಧ್ಯಾಪಕರಾದ ಡಾ. ರಮೇಶ್, ಸಹಪ್ರಾಧ್ಯಾಪಕರಾದ ಡಾ. ರಾಜ್‌ಕಿರಣ್ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ. ಹರ್ಷಿತಾ ಉಪಸ್ಥಿತರಿದ್ದರು.

ಮಧುಮೇಹದಿಂದ ಉಂಟಾಗುವ ಹಾಗೂ ದೀರ್ಘಕಾಲದಿಂದ ಗುಣವಾಗದ ಗಾಯಗಳ ನಿರ್ವಹಣೆಗೆ ವಿಶೇಷ ಆಯುರ್ವೇದ ಚಿಕಿತ್ಸೆಗಳು ಮತ್ತು ಔಷಧಿಗಳನ್ನು ರಿಯಾಯಿತಿ ದರದಲ್ಲಿ ಒದಗಿಸಲಾಗುತ್ತಿದೆ. ಶಿಬಿರದ ಅಂಗವಾಗಿ ಉಚಿತ ವೈದ್ಯಕೀಯ ಸಮಾಲೋಚನೆ, ಪಂಚಕರ್ಮ ಚಿಕಿತ್ಸೆ ಮತ್ತು ಪ್ರಯೋಗಾಲಯ ಪರೀಕ್ಷೆಗಳಲ್ಲಿ ಶೇ. 50 ರಿಯಾಯಿತಿ, ಔಷಧಿಗಳ ಮೇಲೆ ಶೇ. 10 ರಿಯಾಯಿತಿ ಹಾಗೂ ಫಿಸಿಯೋಥೆರಪಿ, ಅಕ್ಯುಪಂಕ್ಚರ್ ಮತ್ತು TENS ಚಿಕಿತ್ಸೆಯಲ್ಲಿ ಶೇ. 20 ರಿಯಾಯಿತಿ ನೀಡಲಾಗುತ್ತಿದೆ. ಉಚಿತ ಆಹಾರ ಪದ್ಧತಿ ಮತ್ತು ಯೋಗ ಸಮಾಲೋಚನೆ ಹಾಗೂ ಒಳರೋಗಿ ಚಿಕಿತ್ಸೆಯಲ್ಲಿ ರಿಯಾಯಿತಿ ಸೌಲಭ್ಯವೂ ಲಭ್ಯವಿದೆ. ಜೊತೆಗೆ ಫ್ಯಾಮಿಲಿ ಆರೋಗ್ಯ ಕಾರ್ಡ್‌ನಲ್ಲಿ ಶೇ. 50 ರಿಯಾಯಿತಿ ನೀಡಲಾಗುತ್ತಿದೆ.

ಶಿಬಿರವು ಪ್ರತಿದಿನ ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ನಡೆಯಲಿದೆ. ಮಧುಮೇಹದಿಂದ ಉಂಟಾಗುವ ಗಾಯಗಳ ಸಮಸ್ಯೆ ಹೊಂದಿರುವವರು ಹಾಗೂ ದೀರ್ಘಕಾಲದಿಂದ ಗುಣವಾಗದ ಗಾಯಗಳಿಂದ ಬಳಲುತ್ತಿರುವ ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆಯು ಮನವಿ ಮಾಡಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 81234 03233 (ರಿಸೆಪ್ಷನ್).
ಟೋಲ್ ಫ್ರೀ ಸಂಖ್ಯೆ: 18004253178.