ಎಂಟು ಕಡಲ ಪಿಪಿಪಿ ಯೋಜನೆಗಳ ಹೂಡಿಕೆದಾರರ ಕೈಪಿಡಿ ಮತ್ತು ಮಾರುಕಟ್ಟೆ ಸಾಮಾಗ್ರಿಗಳನ್ನು ಬಿಡುಗಡೆ ಮಾಡಿದ ಕರ್ನಾಟಕ ಜಲಸಾರಿಗೆ ಮಂಡಳಿ


ಉಡುಪಿ: 7ನೇ ಕರ್ನಾಟಕ ರಾಜ್ಯ ಕಡಲ ಮತ್ತು ಜಲಮಾರ್ಗ ಸಾರಿಗೆ ಸಮಿತಿ ಸಭೆಯು ಸೋಮವಾರ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸುವುದು, ಅವಕಾಶಗಳನ್ನು ತೆರೆಯುವುದು ಮತ್ತು ಕರ್ನಾಟಕದ ಕಡಲ ಮೂಲಸೌಕರ್ಯವನ್ನು ಬಲಪಡಿಸುವುದರ ಮೇಲೆ ಗಮನಹರಿಸಿ, ರಾಜ್ಯಾದ್ಯಂತ ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವದ ಕಡಲ ಯೋಜನೆಗಳನ್ನು ಮುನ್ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಈ ಉಪಕ್ರಮಗಳನ್ನು ಮುನ್ನಡೆಸುವ ಪ್ರಮುಖ ಹೆಜ್ಜೆಯಾಗಿ, ಸಚಿವ ಸಂಪುಟದಿAದ ಅನುಮೋದನೆ ಪಡೆದ ಎಂಟು ಕಡಲ ಯೋಜನೆಗಳನ್ನು ಒಳಗೊಂಡ 8,295 ರೂ. ಕೋಟಿ ಅಂದಾಜು ಹೂಡಿಕೆ ಸಾಮರ್ಥ್ಯದ ಮಾರುಕಟ್ಟೆ ಸಾಮಗ್ರಿಗಳು ಮತ್ತು ಹೂಡಿಕೆದಾರರ ಕೈಪಿಡಿಯನ್ನು ಗಣ್ಯರು ಬಿಡುಗಡೆ ಮಾಡಿದರು. ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮುಜುರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರ ಸಮರ್ಥ ನಾಯಕತ್ವದಲ್ಲಿ, ರಾಜ್ಯದ ಕಡಲ ಸಾಮರ್ಥ್ಯವನ್ನು ಸ್ಪಷ್ಟ ಆರ್ಥಿಕ ಅವಕಾಶಗಳಾಗಿ ಪರಿವರ್ತಿಸಲು ಕರ್ನಾಟಕ ಸರ್ಕಾರ ಬದ್ಧವಾಗಿದೆ. ಈ ಯೋಜನೆಗಳನ್ನು ಮುನ್ನಡೆಸಲು ಕರ್ನಾಟಕ ಜಲಸಾರಿಗೆ ಮಂಡಳಿ ಸಜ್ಜಾಗಿದ್ದು, ಯೋಜನೆಗಳ ಟೆಂಡರ್‌ಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು.

ಹೂಡಿಕೆದಾರರ ಕೈಪಿಡಿ ಮತ್ತು ಮಾರುಕಟ್ಟೆ ಸಾಮಗ್ರಿಗಳು ರಾಜ್ಯದ ಕಡಲ ಯೋಜನೆಗಳ ಸರಣಿ, ಹೂಡಿಕೆ ಅವಕಾಶಗಳು ಮತ್ತು ಕಾರ್ಯತಂತ್ರದ ಅನುಕೂಲಗಳನ್ನು ಒಂದೆಡೆ ಸೇರಿಸಿ, ದೇಶೀಯ ಹಾಗೂ ಜಾಗತಿಕ ಸಂಭಾವ್ಯ ಹೂಡಿಕೆದಾರರಿಗೆ ಕರ್ನಾಟಕದ ಕಡಲ ಸಾಮರ್ಥ್ಯದ ಸಮಗ್ರ ಚಿತ್ರಣವನ್ನು ಒದಗಿಸುತ್ತವೆ. ಈ ಉಪಕ್ರಮಗಳು ಹೂಡಿಕೆಗಳನ್ನು ಆಕರ್ಷಿಸುವ, ಕಡಲ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ, ಉದ್ಯೋಗ ಸೃಷ್ಟಿಸುವ ಮತ್ತು ರಾಜ್ಯದ ಕರಾವಳಿ ಪ್ರದೇಶ ಆರ್ಥಿಕ ಅಭಿವೃದ್ಧಿಯನ್ನು ತ್ವರಿತಗೊಳಿಸುವ ನಿರೀಕ್ಷೆಯಿದೆ.

ಬಲಿಷ್ಠ ಯೋಜನಾ ಸರಣಿ, ನಿರ್ಣಾಯಕ ನೀತಿ ಬೆಂಬಲ ಮತ್ತು ಕೇಂದ್ರೀಕೃತ ಅನುಷ್ಠಾನದೊಂದಿಗೆ, ಕರ್ನಾಟಕವು ಭಾರತದ ಕಡಲ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ನಿಲ್ಲಲು ಸಜ್ಜಾಗಿದ್ದು, ಪ್ರಮುಖ ಕಡಲ ಹೂಡಿಕೆ ತಾಣವಾಗಿ ಹೊರಹೊಮ್ಮುತ್ತಾ ದೇಶದ ನೀಲಿ ಆರ್ಥಿಕತೆ (ಬ್ಲೂ ಎಕಾನಮಿ) ಕಲ್ಮನೆಗೆ ಗಣನೀಯ ಕೊಡುಗೆ ನೀಡಲಿದೆ.

ಈ ಸಂದರ್ಭದಲ್ಲಿ ಕ್ಯಾಪ್ಟನ್ ಸಂಜಯ್ ಟಿ. ಉಗಲ್ಮುಗಲೆ, ನಿರ್ದೇಶಕರು, ಬಂದರು ಮತ್ತು ಸದಸ್ಯರು (ಮೆರಿಟ್ಟೆಮ್ ಮತ್ತು ಒಳನಾಡು ಜಲಸಾರಿಗೆ ಕಾರ್ಯಾಚರಣೆ), ಕರ್ನಾಟಕ ಜಲಸಾರಿಗೆ ಮಂಡಳಿ, ಡಾ. ವಿಶಾಲ್ ಆರ್, ಕಾರ್ಯದರ್ಶಿಗಳು, ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ, ಡಾ. ಶಾಲಿನಿ ರಜನೀಶ್, ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ, ಎಚ್.ಸಿ. ಬಾಲಚಂದ್ರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕರ್ನಾಟಕ ಜಲಸಾರಿಗೆ ಮಂಡಳಿ ಇವರುಗಳು ಉಪಸ್ಥಿತರಿದ್ದರು.