ಎಂಟು ಕಡಲ ಪಿಪಿಪಿ ಯೋಜನೆಗಳ ಹೂಡಿಕೆದಾರರ ಕೈಪಿಡಿ ಮತ್ತು ಮಾರುಕಟ್ಟೆ ಸಾಮಾಗ್ರಿಗಳನ್ನು ಬಿಡುಗಡೆ ಮಾಡಿದ ಕರ್ನಾಟಕ ಜಲಸಾರಿಗೆ ಮಂಡಳಿ

ಉಡುಪಿ: 7ನೇ ಕರ್ನಾಟಕ ರಾಜ್ಯ ಕಡಲ ಮತ್ತು ಜಲಮಾರ್ಗ ಸಾರಿಗೆ ಸಮಿತಿ ಸಭೆಯು ಸೋಮವಾರ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸುವುದು, ಅವಕಾಶಗಳನ್ನು ತೆರೆಯುವುದು ಮತ್ತು ಕರ್ನಾಟಕದ ಕಡಲ ಮೂಲಸೌಕರ್ಯವನ್ನು ಬಲಪಡಿಸುವುದರ ಮೇಲೆ ಗಮನಹರಿಸಿ, ರಾಜ್ಯಾದ್ಯಂತ ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವದ ಕಡಲ ಯೋಜನೆಗಳನ್ನು ಮುನ್ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ಉಪಕ್ರಮಗಳನ್ನು ಮುನ್ನಡೆಸುವ ಪ್ರಮುಖ ಹೆಜ್ಜೆಯಾಗಿ, ಸಚಿವ ಸಂಪುಟದಿAದ ಅನುಮೋದನೆ ಪಡೆದ ಎಂಟು ಕಡಲ ಯೋಜನೆಗಳನ್ನು ಒಳಗೊಂಡ 8,295 ರೂ. […]

ವೈವಿಧ್ಯಮಯ ಕಲಾಪ್ರಕಾರಗಳ ಅನಾವರಣ, ಸಂಪ್ರದಾಯದ ವೈಭವದೊಂದಿಗೆ ಆಳ್ವಾಸ್ ದೀಪಾವಳಿ ಸಂಭ್ರಮ; ಸಾವಿರ ವಿದ್ಯಾರ್ಥಿ ಕಲಾವಿದರ ಕಲಾವೈಭವ, 50 ಸಾವಿರಕ್ಕೂ ಅಧಿಕ ಜನರ ಸಂಭ್ರಮ

ವಿದ್ಯಾಗಿರಿ: ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕ ಪರಂಪರೆ ಹಾಗೂ ವಿವಿಧ ರಾಜ್ಯಗಳ ಕಲಾಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸುವ ಮೂಲಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ದೀಪಾವಳಿ ಸಂಭ್ರಮ ಗಮನ ಸೆಳೆಯಿತು. ವೈವಿಧ್ಯತೆಯಲ್ಲಿ ಏಕತೆಯ ಆಶಯದೊಂದಿಗೆ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಸಾಮರಸ್ಯ ಮೂಡಿಸುವ ಉದ್ದೇಶದಿಂದ ಮೂಡುಬಿದಿರೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮoದಿರದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಪ್ರದಾಯ, ಧಾರ್ಮಿಕ ಆಚರಣೆ ಹಾಗೂ ಕಲಾಪ್ರದರ್ಶನಗಳ ಸಮ್ಮಿಲನ ಕಂಡುಬಂತು. ಕಾರ್ಯಕ್ರಮದ ಆರಂಭದಲ್ಲಿ ಮಂಗಳೂರಿನ ಶ್ರೀ ಮೂಕಾಂಬಿಕಾ ಚೆಂಡೆ ಬಳಗದ […]

ಸವಿತಾ ಶೆಟ್ಟಿ ಅವರಿಗೆ ಪಿ.ಎಚ್.ಡಿ. ಪದವಿ

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಸವಿತಾ ಶೆಟ್ಟಿ ಅವರು ‘ಡಿಸೈನ್ ಅಂಡ್ ಡೆವಲಪ್‌ಮೆಂಟ್ ಆಫ್ ನಾಲೆಡ್ಜ್ ಬೇಸ್ ಫ್ರಮ್ ದ ಕ್ಲಿನಿಕಲ್ ಡಾಕ್ಯುಮೆಂಟ್ಸ್ ಯೂಸಿಂಗ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಟೆಕ್ನಿಕ್ಸ್’ ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಘೋಷಿಸಿದೆ. ಅವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ […]

ಮೆಟಾ, ಗೂಗಲ್ ಗೆ ಟಕ್ಕರ್ ಕೊಡಲು ಬರಲಿದೆ ಆಪಲ್ ಸ್ಮಾರ್ಟ್ ಗ್ಲಾಸ್: ಕಣ್ಣಲ್ಲೇ ಅದ್ಬುತ ಲೋಕ ಕಾಣಿಸುತ್ತೆ ಈ ಸ್ಮಾರ್ಟ್ ಗ್ಲಾಸ್!

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕ್ರಾಂತಿ ಸೃಷ್ಟಿಸಿರುವ ಐಫೋನ್ ತಯಾರಕ ಆಪಲ್ (Apple), ಇದೀಗ ಸ್ಮಾರ್ಟ್ ಗ್ಲಾಸ್ ಮಾರುಕಟ್ಟೆಗೆ ಪ್ರವೇಶಿಸಲು ಸಜ್ಜಾಗಿದೆ. ಮುಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳಷ್ಟೇ ದೊಡ್ಡ ಮಾರುಕಟ್ಟೆಯಾಗಿ ಬೆಳೆಯುವ ನಿರೀಕ್ಷೆಯಿರುವ ಸ್ಮಾರ್ಟ್ ಗ್ಲಾಸ್ ಕ್ಷೇತ್ರದಲ್ಲಿ ತನ್ನ ಮೊದಲ ಉತ್ಪನ್ನವನ್ನು ಪರಿಚಯಿಸಲು ಕಂಪನಿ ಸಿದ್ಧತೆ ನಡೆಸಿದೆ. ಆಪಲ್‌ನ ಮುಂಬರುವ ಸ್ಮಾರ್ಟ್ ಗ್ಲಾಸ್ ವಿನ್ಯಾಸ, ತಂತ್ರಜ್ಞಾನ ಮತ್ತು ವೈಶಿಷ್ಟ್ಯಗಳ ಕುರಿತ ಮಾಹಿತಿಗಳು ಟೆಕ್ ವಲಯದಲ್ಲಿ ಕುತೂಹಲ ಮೂಡಿಸಿವೆ. ಬ್ಲೂಮ್‌ಬರ್ಗ್‌ನ ಖ್ಯಾತ ತಂತ್ರಜ್ಞಾನ ವರದಿಗಾರ ಮಾರ್ಕ್ ಗುರ್ಮನ್ ಅವರ ವರದಿಯ ಪ್ರಕಾರ, ಆಪಲ್ […]

ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಹೊರಟಿದ್ದೀರಾ? ಹಾಗಾದ್ರೆ ಇಲ್ಲಿ ಗಮನಿಸಿ, ದರ್ಶನಕ್ಕೆ ವರ್ಚುವಲ್ ಕ್ಯೂ ಬುಕ್ಕಿಂಗ್ ಕಡ್ಡಾಯ: ಆನ್‌ಲೈನ್ ಟಿಕೆಟ್ ಪಡೆಯುವುದು ಹೇಗೆ?

ಕೇರಳ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ 2026–27ನೇ ಸಾಲಿನ ಮಂಡಲ-ಮಕರವಿಳಕ್ಕು ಯಾತ್ರೆ ನವೆಂಬರ್ 16ರಿಂದ ಆರಂಭವಾಗಿದೆ. 2027ರ ಜನವರಿ 20ರವರೆಗೆ ನಡೆಯಲಿರುವ ಈ ಯಾತ್ರೆಗೆ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು ಬಯಸುವ ಭಕ್ತರು ಮುಂಚಿತವಾಗಿ ಆನ್‌ಲೈನ್‌ನಲ್ಲಿ ವರ್ಚುವಲ್ ಕ್ಯೂ ಟಿಕೆಟ್ ಕಾಯ್ದಿರಿಸಿಕೊಳ್ಳಬೇಕು. ಶಬರಿಮಲೆ ದರ್ಶನಕ್ಕಾಗಿ ದೇವಸ್ವಂ ಮಂಡಳಿ ವರ್ಚುವಲ್ ಕ್ಯೂ ವ್ಯವಸ್ಥೆಯನ್ನು ಕಲ್ಪಿಸಿದೆ. ಈ ಮೂಲಕ ಭಕ್ತರು ತಮಗೆ ಅನುಕೂಲವಾದ ದಿನಾಂಕ ಮತ್ತು ಸಮಯವನ್ನು […]