MSDC ವತಿಯಿಂದ ಉಚಿತ ಒಂದು ತಿಂಗಳ ಆಯಿಲ್ ಆ್ಯಂಡ್ ಗ್ಯಾಸ್ ಉದ್ಯಮ ತರಬೇತಿ: 10ನೇ ತರಗತಿ ಪಾಸಾದವರಿಗೂ ಇಲ್ಲಿದೆ ಒಳ್ಳೆಯ ಅವಕಾಶ

ಮಣಿಪಾಲ: ಆಯಿಲ್ ಆ್ಯಂಡ್ ಗ್ಯಾಸ್ ಉದ್ಯಮದಲ್ಲಿ ಉದ್ಯೋಗಾವಕಾಶ ಪಡೆಯಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗಾಗಿ ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ವತಿಯಿಂದ ಒಂದು ತಿಂಗಳ ಉಚಿತ ಉದ್ಯಮ ಆಧಾರಿತ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ತರಬೇತಿಯಲ್ಲಿ ಹೆಲ್ತ್ ಆ್ಯಂಡ್ ಸೇಫ್ಟಿ ಆಫೀಸರ್, ಹೈಡ್ರೋ ಜೆಟ್ಟಿಂಗ್, ಸರ್ಟಿಫೈಡ್ ಪರ್ಮಿಟ್ ರಿಸೀವರ್, ರಿಗ್ಗರ್ ಲೆವೆಲ್-3, ಸ್ಟ್ಯಾಂಡ್‌ಬೈ ಮ್ಯಾನ್ ಮತ್ತು ಫೈರ್ ವಾಚ್, ಫ್ಲ್ಯಾಗ್‌ಮನ್, ಬ್ರೀಥಿಂಗ್ ಅಪರೇಟಸ್, ಸರ್ಟಿಫೈಡ್ ಮೆಕ್ಯಾನಿಕಲ್ ಪೈಪ್ ಫಿಟ್ಟರ್ ಹಾಗೂ ಸರ್ಟಿಫೈಡ್ ಬೋಲ್ಟ್ ಟೈಟನಿಂಗ್ (ಕಾಂಪೊನೆಂಟ್ ಮೌಂಟಿಂಗ್) ವಿಭಾಗಗಳಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.

ಅರ್ಹತೆ ಮತ್ತು ಸೌಲಭ್ಯಗಳು: ಕನಿಷ್ಠ 10ನೇ ತರಗತಿ ಅಥವಾ ಐಟಿಐ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 35 ವರ್ಷ. ಒಂದು ತಿಂಗಳ ತರಬೇತಿಯ ಅವಧಿಯಲ್ಲಿ ಎರಡು ಮೌಲ್ಯಮಾಪನ ಪರೀಕ್ಷೆಗಳು ನಡೆಯಲಿವೆ. ತರಬೇತಿ ಪೂರ್ಣಗೊಳಿಸಿದವರಿಗೆ ಭಾರತದ ಆಯಿಲ್ ಆ್ಯಂಡ್ ಗ್ಯಾಸ್ ಕಂಪನಿಯಲ್ಲಿ ಒಂದು ತಿಂಗಳ ಖಾತರಿಯ ಇಂಟರ್ನ್‌ಶಿಪ್ ಅವಕಾಶ ಕಲ್ಪಿಸಲಾಗುತ್ತದೆ. ಭಾರತ ಹಾಗೂ ವಿದೇಶಗಳಲ್ಲಿ ಉದ್ಯೋಗಾವಕಾಶ ಪಡೆಯಲು ಪ್ಲೇಸ್‌ಮೆಂಟ್ ನೆರವು ಕೂಡ ಒದಗಿಸಲಾಗುತ್ತದೆ.

ತರಬೇತಿ ಸಂಪೂರ್ಣ ಉಚಿತವಾಗಿದ್ದು, ಉದ್ಯಮಕ್ಕೆ ಅಗತ್ಯವಿರುವ ತಾಂತ್ರಿಕ ಜ್ಞಾನ ಮತ್ತು ಪ್ರಾಯೋಗಿಕ ಕೌಶಲಗಳನ್ನು ಬೆಳೆಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ.

ಹೆಚ್ಚಿನ ಮಾಹಿತಿಗಾಗಿ 8123165069 ಸಂಖ್ಯೆಯನ್ನು ಸಂಪರ್ಕಿಸಬಹುದು. www.msdcskills.org ವೆಬ್‌ಸೈಟ್‌ನಲ್ಲಿಯೂ ವಿವರಗಳನ್ನು ಪಡೆಯಬಹುದು.