ಶ್ರೀರಾಮ್ ಫ್ರೆಂಡ್ಸ್ ಕೊಂಡಾಡಿ ಭಜನೆಕಟ್ಟೆ ವತಿಯಿಂದ ದೀಪಾವಳಿ ಹಬ್ಬ ಆಚರಣೆ

ಹಿರಿಯಡಕ: ಶ್ರೀರಾಮ್ ಫ್ರೆಂಡ್ಸ್ ಕೊಂಡಾಡಿ ಭಜನೆಕಟ್ಟೆ ಇವರ ವತಿಯಿಂದ ಕೊಂಡಾಡಿ ಪುರದೊಡೆಯ ಶ್ರೀರಾಮ ದೇವರ ಸನ್ನಿಧಿಯಲ್ಲಿ ಹಣತೆ ದೀಪಗಳನ್ನು ಹಚ್ಚಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು.

ಸಂಘದ ಸದಸ್ಯರಾದ ತುಶಾಂತ್ ಕೊಂಡಾಡಿ ಇವರ ಕೈಚಳಕದಿಂದ ಸುಮಾರು 300 ಗೆರಟೆಗಳಿಂದ ತಯಾರಿಸಲ್ಪಟ್ಟ ಗೂಡು ದೀಪವನ್ನು ಏರಿಸಿಲಾಯಿತು.

ಈ ಸಂದರ್ಭದಲ್ಲಿ ಇತ್ತೀಚಿಗೆ ನಿರಂತರ 28 ಗಂಟೆಗಳ ಗಾಯನದ ಮೂಲಕ ವಿಶ್ವದಾಖಲೆಯನ್ನು ಮುಡಿಗೇರಿಸಿಕೊಂಡಿರುವ ಯಶವಂತ್ ಎಂ. ಜಿ ಯವರಿಗೆ ಅಭಿನಂದಿಸಲಾಯಿತು.