ಪಡಿತರ ಚೀಟಿದಾರರಿಗೆ ಸರ್ಕಾರ ಗುಡ್‌ ನ್ಯೂಸ್‌ – ನ.30 ರವರೆಗೆ ಇ-ಕೆವೈಸಿ ಅವಧಿ ವಿಸ್ತರಣೆ

ಬೆಂಗಳೂರು: ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ಇ-ಕೆವೈಸಿಗೆ (e-KYC) ನೀಡಿದ್ದ ಗಡುವನ್ನು ಸರ್ಕಾರ ವಿಸ್ತರಿಸಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ನವೆಂಬರ್ 30 ರವರೆಗೂ ಇ-ಕೆವೈಸಿ ಅವಧಿ ವಿಸ್ತರಣೆ ಮಾಡಿದೆ. ನ.30 ನಂತರ ಯಾವುದೇ ಕಾರಣಕ್ಕೂ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ ಎಂದು ಆಹಾರ ಇಲಾಖೆ ಸ್ಪಷ್ಟಪಡಿಸಿದೆ.

ಯೋಜನೆಗಳ ಸೌಲಭ್ಯಗಳು ನಿರಂತರವಾಗಿ ಮುಂದುವರಿಯಲು, ಬಾಕಿ ಇರುವ ಎಲ್ಲಾ ಅರ್ಹ ಫಲಾನುಭವಿಗಳು ನಿಗದಿತ ಅವಧಿಯೊಳಗೆ ಕಡ್ಡಾಯವಾಗಿ ಮರು ಇ- ಕೆವೈಸಿ ಮಾಡಿಸಿಕೊಳ್ಳಲು ಇಲಾಖೆ ಸೂಚನೆ ನೀಡಿದೆ.

ನ.10 ರವರೆಗೂ ಇ-ಕೆವೈಸಿಗೆ ಅವಕಾಶ ನೀಡಲಾಗಿತ್ತು. 2.67 ಕೋಟಿ ಫಲಾನುಭವಿಗಳ ಪೈಕಿ 2.27 ಲಕ್ಷ ಫಲಾನುಭವಿಗಳು ಇ-ಕೆವೈಸಿ ‌ಮಾಡಿಸಿದ್ದಾರೆ. ಇನ್ನೂ‌ 39 ಲಕ್ಷ ಫಲಾನುಭವಿಗಳು ಇ-ಕೆವೈಸಿ ಮಾಡಿಸಿಲ್ಲ. ಉಳಿದವರಿಗೂ ಅನುಕೂಲ ಆಗಲೆಂದು ಇಲಾಖೆ ಅವಧಿ ವಿಸ್ತರಿಸಿದೆ.