ಉಡುಪಿ: ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಅನುಷ್ಠಾನದಲ್ಲಿರುವ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಯೋಜನೆಯಡಿಯಲ್ಲಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಖಾಲಿ ಇರುವ ಪಿ & ಒ ಇಂಜಿನಿಯರ್ ಮತ್ತು ಲೆದರ್ ವರ್ಕರ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪಿ & ಒ ಹುದ್ದೆಗೆ ಬ್ಯಾಚುಲರ್ ಆಫ್ ಪ್ರೋಸ್ಥೆಟಿಕ್ ಅಂಡ್ ಆರ್ಥೆಟಿಕ್ಸ್ ಬಿಪಿಒ ಅಥವಾ ಡಿಪ್ಲೋಮಾ ಇನ್ ಪ್ರೋಸ್ಥೆಟಿಕ್ ಅಂಡ್ ಆರ್ಥೆಟಿಕ್ಸ್ ಡಿಪಿಒ ವಿದ್ಯಾರ್ಹತೆ ಮತ್ತು ಸದ್ರಿ ಕ್ಷೇತ್ರದಲ್ಲಿ 2 ರಿಂದ 5 ವರ್ಷ ಅನುಭವ ಹೊಂದಿರುವ ಹಾಗೂ ಲೆದರ್ವರ್ಕರ್ ಹುದ್ದೆಗೆ ಲೆದರ್ವರ್ಕ್ ಬಗ್ಗೆ ಪ್ರಮಾಣಪತ್ರವನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳು ನವೆಂಬರ್ 20 ರ ಒಳಗಾಗಿ ಸದಸ್ಯ ಕಾರ್ಯದರ್ಶಿಯವರು, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಭಾರತೀಯ ರೆಡ್ಕ್ರಾಸ್ ಸಂಸ್ಥೆ, ರೆಡ್ಕ್ರಾಸ್ ಭವನ, ಅಜ್ಜರಕಾಡು, ಉಡುಪಿ-576101 ಇವರಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ: 0820-2533372, 9964583433 ಸಂಪರ್ಕಿಸಬಹುದಾಗಿದ್ದು, ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಸದಸ್ಯ ಕಾರ್ಯದರ್ಶಿಗಳ ಕಚೇರಿ ಪ್ರಕಟಣೆ ತಿಳಿಸಿದೆ.















