ಉಡುಪಿ ನಗರಸಭೆಯ ದಿನಾಂಕ ಮರು ಬಹಿರಂಗ ಹರಾಜು ಪ್ರಕಟಣೆಯನ್ವಯ (ಸಂಖ್ಯೆ: ಉನಸ.R1.ಸಿಆರ್.01/2026-27), ಗುಂಡಿಬೈಲು ಸಾರ್ವಜನಿಕ ಮೈದಾನದಲ್ಲಿ (ನಗರಸಭೆ ಮೈದಾನ) ದೀಪಾವಳಿ ಹಬ್ಬದ ಪ್ರಯುಕ್ತ 06 ತಾತ್ಕಾಲಿಕ ಸುಡುಮದ್ದು ಮಾರಾಟ ಮಳಿಗೆಗಳನ್ನು ವಹಿಸಿಕೊಡಲು ದಿನಾಂಕ 06.11.2026ರಂದು ಪೂರ್ವಾಹ್ನ 11-00 ಗಂಟೆಗೆ ಉಡುಪಿ ತಹಶೀಲ್ದಾರ್ ಕಛೇರಿ ಸಭಾಂಗಣದಲ್ಲಿ ಬಹಿರಂಗ ಏಲಂ ಕರೆಯಲಾಗಿತ್ತು. ಸದರಿ ಹರಾಜು ಪ್ರಕಟಣೆಯನ್ನು ಪ್ರಶ್ನಿಸಿ ಶ್ರೀ ಜಯರಾಜ್ ಅವರು ವಕೀಲರಾದ ತನೋಜ್ ಕುಮಾರ್ ಮತ್ತು ದಿಗಂತ್ ಜೈನ್ ಅವರ ಮೂಲಕ ಹೈಕೋರ್ಟ್ಗೆ ರಿಟ್ ಅರ್ಜಿ (W.P. No. 34308/2026) ಸಲ್ಲಿಸಿದ್ದರು.
ನವೆಂಬರ್ 5ರಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ಪೀಠವು, ದಿನಾಂಕ 02.11.2026ರ ತಾತ್ಕಾಲಿಕ ಹರಾಜು ಪ್ರಕಟಣೆಯಡಿ ನಡೆಯಬೇಕಿದ್ದ ಎಲ್ಲಾ ಮುಂದಿನ ಪ್ರಕ್ರಿಯೆಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದ್ದು, ಮುಂದಿನ ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ದಿನಾಂಕ 06.11.2026ರಂದು ನಡೆಯಬೇಕಿದ್ದ ಬಹಿರಂಗ ಹರಾಜು ಪ್ರಕ್ರಿಯೆಯು ನ್ಯಾಯಾಲಯದ ತಡೆಯಾಜ್ಞೆಗೆ ಒಳಪಟ್ಟಿರುತ್ತದೆ ಎಂದು ಸಾರ್ವಜನಿಕರ ಹಾಗೂ ಬಿಡ್ಡುದಾರರ ಗಮನಕ್ಕೆ ತರಲಾಗಿದೆ.















