ಬೆಂಗಳೂರು: ದೀಪಾವಳಿ (Deepavali) ಹೊತ್ತಿನಲ್ಲೇ ರಾಜ್ಯದ ರೈತರಿಗೆ ಸಿಎಂ ಡಿಕೆ ಶಿವಕುಮಾರ್ (DK Shivakumar) ಬಂಪರ್ ಉಡುಗೊರೆ ನೀಡಿದ್ದಾರೆ. ಈ ಹಿಂದೆ 2,500 ರೂ. ಇದ್ದ ಬರ ಪರಿಹಾರದ ಮೊತ್ತವನ್ನ 5,000 ರೂ.ಗೆ ಹೆಚ್ಚಿಸಿರುವುದಾಗಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ.
ಯಾದಗಿರಿ ಜಿಲ್ಲೆಯ ರೈತರ ಖಾತೆಗೆ (Farmers Account) ಹಣ ಜಮೆ ಮಾಡುವ ಮೂಲಕ ಬರ ಪರಿಹಾರ ವಿರಣೆಗೆ ಸಿಎಂ ಚಾಲನೆ ನೀಡಿದರು. ಬಟನ್ ಕ್ಲಿಕ್ ಮಾಡುವ ಮೂಲಕ ರೈತರ ಖಾತೆಗೆ ಡಿಬಿಟಿ ಹಣ ಪಾವತಿಗೆ ಚಾಲನೆ ನೀಡಿದರು.
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು 2,500 ರೂ. ಬರ ಪರಿಹಾರ ಕೊಡ್ತಾ ಇದ್ದೀವಿ, ನಾವು ಹೇಳಿದಂತೆ 1,250 ಕೋಟಿ ರೂ. ಹಣ ಹಾಕುತ್ತಿದ್ದೇವೆ. ಡಿಬಿಟಿ ಮೂಲಕ ರೈತರ ಖಾತೆಗೆ ನೇರವಾಗಿ ಹಣ ಹೋಗಲಿದೆ. ದೀಪಾವಳಿ ಮುಗಿದ ಬಳಿಕ ಇನ್ನೂ 2,500 ರೂ. ಕೊಡ್ತೀವಿ, ಪ್ರತಿ ರೈತನಿಗೆ ಒಟ್ಟು 5,000 ರೂ. ಕೊಡ್ತೀವಿ ಅಂತಾ ಹೇಳಿದ್ರು.
ಇನ್ನೂ ಡಿಸಿಎಂ ಪರಮೇಶ್ವರ್ ಮಾತನಾಡಿ, ವಿಧಾನಸಭೆಯಲ್ಲಿ ನಾವು ಪ್ರತಿ ಎಕರೆಗೆ ಹೇಳಿರಲಿಲ್ಲ, ನಾವು ಪ್ರತಿ ರೈತನಿಗೆ ಅಂತೇಳಿದ್ದೇವು, ಪ್ರತಿ ರೈತನಿಗೆ ಕೊಡ್ತೀವಿ. 57 ಲಕ್ಷ ರೈತರಿಗೆ ಫಲಾನುಭವಿಗಳು ಇದ್ದಾರೆ. ಮೊದಲ ಕಂತಿನ ಇನ್ಪುಟ್ ಸಬ್ಸಿಡಿ 2,500 ಹಣ ಬಿಡುಗಡೆ ಮಾಡ್ತೀವಿ. ಇನ್ನೂ ಸ್ವಲ್ಪ ದಿನದ ನಂತ್ರ ಎರಡನೇ ಕಂತಿನಲ್ಲಿ ಮತ್ತೆ 2,500 ರೂ. ಹಣ ಬಿಡುಗಡೆ ಮಾಡಲಿದ್ದೇವೆ. ಆ ಮೂಲಕ ಪ್ರತಿ ರೈತನಿಗೆ 5,000 ರೂ. ಪರಿಹಾರ ಸಿಗಲಿದೆ. ಒಟ್ಟು ಒಬ್ಬ ರೈತರಿಗೆ 5,000 ರೂ. ಇನ್ಪುಟ್ ಸಬ್ಸಿಡಿ ಪರಿಹಾರ ಬಿಡುಗಡೆ ಆಗಲಿದೆ.2 ಎಕ್ಕರೆಗಿಂತ ಜಾಸ್ತಿ ಭೂಮಿ ಇದ್ದರೂ 5 ಸಾವಿರ ಹಣ ಮಾತ್ರ ಸಿಗಲಿದೆ ಎಂದು ಸ್ಪಷ್ಷಪಡಿಸಿದರು.















