ದಸರಾ ರಜೆ ವಿಸ್ತರಣೆ: ಮಂಗಳೂರಿನ ಶಾಲೆಗಳಿಗೆ ಅ. 22ರಂದು ರಜೆ ಘೋಷಣೆ

ಮಂಗಳೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 1ರಿಂದ 10ನೇ ತರಗತಿವರೆಗಿನ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಗುರುವಾರ (ಅ. 22) ರಂದು ರಜೆ ವಿಸ್ತರಿಸಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಆದೇಶಿಸಿದ್ದಾರೆ.

ಸವಣೂರು: ಬೆಳ್ಳಾರೆ ಠಾಣಾ ವ್ಯಾಪ್ತಿಯ ಸವಣೂರು ಕುವತ್ತೋಡಿ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ, ಹಣವನ್ನು ಪಣವಾಗಿಟ್ಟು ಉಲಾಯಿ – ಪಿದಾಯಿ ಎಂಬ ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕ ಈರಯ್ಯ ಡಿ ಎನ್ ರವರು ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡ ಬಗ್ಗೆ ವರದಿಯಾಗಿದೆ.
ಜೂಜಾಟದಲ್ಲಿ ತೊಡಗಿಕೊಂಡಿದ್ದ ಗುರವ, ಇಸೂಬು, ಕುಶಾಲಪ್ಪ, ತಾಜುದ್ದೀನ್, ರಾಮಣ್ಣ ಎಂಬವರು ವಶಕ್ಕೆ ಪಡೆದುಕೊಂಡು, ಜೂಜಾಟಕ್ಕೆ ಬಳಸಿದ ರೂ 18,150/-ನಗದನ್ನು, ಇಸ್ಪೀಟು ಎಲೆಗಳು ಹಾಗೂ ಇತರೆ ಸೊತ್ತುಗಳನ್ನು ಸ್ವಾಧೀನಪಡಿಸಿದ್ದಾರೆ.