ಮಣಿಪಾಲದಲ್ಲಿ ಮಾನವ ಅಸ್ಥಿಪಂಜರದ ಭಾಗಗಳು ಪತ್ತೆ

ಉಡುಪಿ: ಮಣಿಪಾಲದ ಅನಂತನಗರದ ಮೂರನೇ ಕ್ರಾಸ್ನಲ್ಲಿರುವ ಸರ್ಕಾರಿ ಜಾಗದ ಹಾಡಿಯಲ್ಲಿ ಮಾನವ ಅಸ್ಥಿಪಂಜರದ ಕೆಲವು ಭಾಗಗಳು ಬುಧವಾರ ಪತ್ತೆಯಾಗಿವೆ. ಖಾಲಿ ಜಾಗವನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಭಾಗಶಃ ತಲೆಬುರುಡೆ ಹಾಗೂ ಕೈಗಳ ಮೂಳೆಗಳು ಪತ್ತೆಯಾಗಿವೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂಳೆಗಳ ಭಾಗಗಳನ್ನು ಸಂಗ್ರಹಿಸಿ, ಹೆಚ್ಚಿನ ಪರೀಕ್ಷೆಗಾಗಿ ಮಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಮೂಳೆಗಳು ಯಾರಿಗೆ ಸೇರಿವೆ ಹಾಗೂ ಅವು ಯಾವಾಗಿನವು ಎಂಬುದನ್ನು ವಿಧಿವಿಜ್ಞಾನ ಪರೀಕ್ಷೆಯ ಬಳಿಕ ತಿಳಿಯಬೇಕಿದೆ.
ನೇತ್ರಾವತಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ: ಉದ್ಘಾಟನೆ ಸಮಾರಂಭ

ಉಡುಪಿ:ನೇತ್ರಾವತಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ಉದ್ಘಾಟನೆ ಸಮಾರಂಭ ದಿ 21 ರಂದು ನಡೆಯಿತು.ಈ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರುತಿ ಶಂಕರ್, ಜಯಕರ ಶೆಟ್ಟಿ ಇಂದ್ರಾಳಿ, ಹರಿಪ್ರಸಾದ್ ರೈ, ವಿದ್ಯಾಲತಾ ಯು ಶೆಟ್ಟಿ ಮತ್ತು ಮಲ್ಲಿಕಾ ಶೆಟ್ಟಿ ಉಪಸ್ಥಿತರಿದ್ದರು.
₹35 ಕೋಟಿ ಮೌಲ್ಯದ ಕ್ಯಾನ್ಸರ್ ಚಿಕಿತ್ಸಾ ಉಪಕರಣಗಳಿಗೆ ಆಯುಧ ಪೂಜೆ: ಬಿಪಿಎಲ್ ಕುಟುಂಬಗಳಿಗೆ ಗೌರವ

ಮಂಗಳೂರು, ಅ. 17: ಬಡ ರೋಗಿಗಳಿಗೂ ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆ ದೊರೆಯಬೇಕು ಎಂಬ ಸಂದೇಶ ಸಾರುವ ನಿಟ್ಟಿನಲ್ಲಿ,ಮಂಗಳೂರಿನ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ (ಎಂಐಒ) ಆಸ್ಪತ್ರೆಯಲ್ಲಿ ನಡೆದ ಆಯುಧ ಪೂಜೆಯಲ್ಲಿ ಇಬ್ಬರು ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ವಿಶೇಷ ಗೌರವ ನೀಡಲಾಯಿತು. ಆಸ್ಪತ್ರೆಯ ಮಾಲೀಕರು, ನಿರ್ದೇಶಕರು ಅಥವಾ ಹಿರಿಯ ವೈದ್ಯರ ಬದಲಿಗೆ ಈ ಕುಟುಂಬಗಳ ಸದಸ್ಯರು ನೂತನ ವೈದ್ಯಕೀಯ ಉಪಕರಣಗಳಿಗೆ ಆಯುಧ ಪೂಜೆ ನೆರವೇರಿಸಿದ್ದು ವಿಶೇಷವಾಗಿತ್ತು.ಆಸ್ಪತ್ರೆಯಲ್ಲಿ ₹25 ಕೋಟಿ ವೆಚ್ಚದ ಅತ್ಯಾಧುನಿಕ ಟ್ರೂಬೀಮ್ ರೇಡಿಯೊಥೆರಪಿ ವ್ಯವಸ್ಥೆ […]
ಉಡುಪಿ: ‘ದ ಒರಿಜಿನಲ್ ಆಭರಣ ಜುವೆಲ್ಲರ್ಸ್’ ನವೀಕೃತ ಶೋರೂಂ ಲೋಕಾರ್ಪಣೆ

ಉಡುಪಿ: ನಗರದ ಸಿ.ಬಿ. ರಸ್ತೆಯಲ್ಲಿ 1935ರಲ್ಲಿ ಆರಂಭಗೊಂಡ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ‘ದ ಒರಿಜಿನಲ್ ಆಭರಣ ಜುವೆಲ್ಲರ್ಸ್’ ಅತ್ಯಾಧುನಿಕ ವಿನ್ಯಾಸದೊಂದಿಗೆ ನವೀಕೃತಗೊಂಡಿದ್ದು, ಬುಧವಾರ ಗ್ರಾಹಕರು ಹಾಗೂ ಗಣ್ಯರ ಸಮ್ಮುಖದಲ್ಲಿ ಪುನರಾರಂಭಗೊಂಡಿತು. ಆಭರಣ ಜುವೆಲ್ಲರ್ಸ್ ಪ್ರೈವೇಟ್ ಲಿಮಿಟೆಡ್ನ ಮೊದಲ ಮಳಿಗೆಯಾಗಿರುವ ಈ ಶೋರೂಂ, ಒಂಬತ್ತು ದಶಕಗಳಿಗೂ ಮೀರಿದ ಸಂಸ್ಥೆಯ ಇತಿಹಾಸ ಮತ್ತು ಪರಂಪರೆಯ ಪ್ರತೀಕವಾಗಿದೆ. ಸಂಸ್ಥೆಯ ಪ್ರಧಾನ ಕಚೇರಿಯೂ ಆಗಿರುವ ಈ ಮಳಿಗೆಯನ್ನು ಆಧುನಿಕ ಸೌಲಭ್ಯಗಳೊಂದಿಗೆ ನವೀಕರಿಸಲಾಗಿದ್ದು, ಗ್ರಾಹಕರಿಗೆ ವಿಶಿಷ್ಟ ಖರೀದಿ ಅನುಭವ ಒದಗಿಸುವಂತೆ ರೂಪಿಸಲಾಗಿದೆ. ಗಣ್ಯರಿಂದ ದೀಪ […]
ದಸರಾ ರಜೆ ವಿಸ್ತರಣೆ: ಮಂಗಳೂರಿನ ಶಾಲೆಗಳಿಗೆ ಅ. 22ರಂದು ರಜೆ ಘೋಷಣೆ

ಮಂಗಳೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 1ರಿಂದ 10ನೇ ತರಗತಿವರೆಗಿನ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಗುರುವಾರ (ಅ. 22) ರಂದು ರಜೆ ವಿಸ್ತರಿಸಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಆದೇಶಿಸಿದ್ದಾರೆ. ಸವಣೂರು: ಬೆಳ್ಳಾರೆ ಠಾಣಾ ವ್ಯಾಪ್ತಿಯ ಸವಣೂರು ಕುವತ್ತೋಡಿ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ, ಹಣವನ್ನು ಪಣವಾಗಿಟ್ಟು ಉಲಾಯಿ – ಪಿದಾಯಿ ಎಂಬ ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕ ಈರಯ್ಯ ಡಿ ಎನ್ ರವರು […]