ಉಡುಪಿ: ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವ ಉದ್ದೇಶದಿಂದ ಉಡುಪಿಯ ಬಲ್ಲಾಳ್ ಮೊಬೈಲ್ಸ್ ಸಂಸ್ಥೆಯು ಗ್ರಾಹಕರಿಗಾಗಿ ವಿಶೇಷ ‘ಮೆಗಾ ಫೆಸ್ಟಿವಲ್ ಆಫರ್ಸ್’ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಅ. 12 ರಂದು ನಡೆಯಿತು.

ರೂ. 25 ಲಕ್ಷ ಗೆಲ್ಲುವ ಭರ್ಜರಿ ಅವಕಾಶ:
‘ಹೆಚ್ಚು ಖರೀದಿಸಿ, ಹೆಚ್ಚಿನದನ್ನು ಗೆಲ್ಲಿರಿ’ (Shop More, Win More!) ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿರುವ ಈ ಅಭಿಯಾನವು ಅಕ್ಟೋಬರ್ 10ರಿಂದ ಜನವರಿ 14ರವರೆಗೆ ನಡೆಯಲಿದೆ. ಗ್ರಾಹಕರಿಗೆ ₹25 ಲಕ್ಷಕ್ಕೂ ಅಧಿಕ ಮೌಲ್ಯದ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಸಂಸ್ಥೆ ಒದಗಿಸಿದೆ.
ಈ ಅಭಿಯಾನದಡಿ 11 ಬೈಕ್ಗಳು, 50 ಯುಹೆಚ್ಡಿ ಟಿವಿಗಳು, ಐಫೋನ್ಗಳು, 50 ವಾಷಿಂಗ್ ಮೆಷಿನ್ಗಳು, ಗೋಪ್ರೊ ಕ್ಯಾಮೆರಾಗಳು ಹಾಗೂ ಜೆಬಿಎಲ್ ಹೋಮ್ ಥಿಯೇಟರ್ ಸಿಸ್ಟಮ್ಗಳು ಸೇರಿದಂತೆ ಹಲವು ಬಹುಮಾನಗಳನ್ನು ಗೆಲ್ಲಬಹುದು. ವಿಶೇಷವೆಂದರೆ, ಪ್ರತಿ ಖರೀದಿಯೊಂದಿಗೆ ಖಚಿತ ಉಚಿತ ಉಡುಗೊರೆಯನ್ನೂ ಪಡೆಯಬಹುದಾಗಿದೆ.
ಇದರ ಜೊತೆಗೆ, ಬಲ್ಲಾಳ್ ಮೊಬೈಲ್ಸ್ನ ಇನ್ಸ್ಟಾಗ್ರಾಂ ಫಾಲೋವರ್ಸ್ಗಳಿಗಾಗಿ ವಿಶೇಷ ಉಡುಗೊರೆಗಳನ್ನು ಘೋಷಿಸಲಾಗಿದೆ. ಐದು ಸಮಾಧಾನಕರ ಬಹುಮಾನಗಳಾಗಿ ಬೆಳ್ಳಿ ನಾಣ್ಯ, ಏರ್ ಫ್ರೈಯರ್, ಮೊಬೈಲ್ ಗಿಂಬಲ್, ಟ್ರಾಲಿ ಬ್ಯಾಗ್ ಹಾಗೂ ಮಿಕ್ಸರ್ ಗ್ರೈಂಡರ್ಗಳನ್ನು ನೀಡಲಾಗುತ್ತದೆ.
ಹಬ್ಬದ ಈ ವಿಶೇಷ ಕೊಡುಗೆಗಳ ಪ್ರಯೋಜನ ಪಡೆಯಲು ಗ್ರಾಹಕರು ಉಡುಪಿಯ ಕಲ್ಪನಾ ಥಿಯೇಟರ್ ಎದುರಿನ ಓರಿಯನ್ ಬಿಲ್ಡಿಂಗ್ನಲ್ಲಿರುವ ಬಲ್ಲಾಳ್ ಮೊಬೈಲ್ಸ್ ಮಳಿಗೆಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ 98862 45522 ಸಂಖ್ಯೆಯನ್ನು ಸಂಪರ್ಕಿಸಬಹುದು.
















