ದೆಹಲಿಯಲ್ಲಿ ಮುಖ್ಯ ಮಂತ್ರಿ ಡಿಕೆಶಿಯವರನ್ನು ರಾಹುಲ್ ಗಾಂಧಿ ನಡೆಸಿಕೊಂಡ ರೀತಿ ನಿಜಕ್ಕೂ ಸಮಸ್ತ ಕನ್ನಡಿಗರಿಗೆ ಅವಮಾನ ತರುವಂತಿದೆ

ಪಾಪ ನಮ್ಮಮುಖ್ಯ ಮಂತ್ರಿ ಡಿಕೆಶಿ ಅವರಿಗೆ ತನ್ನ ಮುಖ ಒಮ್ಮೆ ಯಾದರುರಾಹುಲ್‌ ಗಾಂಧಿಗೆ ತೇೂರಿಸ ಬೇಕೆಂಬ ಹಂಬಲ.ರಾಹುಲ್‌ ನಾನೇ ಮುಂಚೂಣಿ ನಾಯಕನಾಗಿ ಮೆರೆಯ ಬೇಕೆಂಬ ಚಟ.ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಯಾವಾಗಲೂ ಮಕ್ಕಳಾಟಿಗೆ ಬುದ್ಧಿ ಪ್ರದಶ೯ನಮಾಡುವುದು ಅವರ ಹುಟ್ಟು ಗುಣ.ಈ ಮಧ್ಯದಲ್ಲಿ ನಮ್ಮಮುಖ್ಯ ಮಂತ್ರಿಗಳನ್ನು ಬೆನ್ನು ಪಟ್ಟಿ ಹಿಡಿದು ಹಿಂದಕ್ಕೆ ತಳಿದ ವೀಡಿಯೊ ವೈರಲ್ ಆಗುತ್ತಿದೆ.ಇದು ಕನ್ನಡಿಗರಿಗೆ ಅತ್ಯಂತ ಬೇಸರ ಅವಮಾನ ತರುವ ಸಂದರ್ಭ.ಒಂದು ರಾಜ್ಯದ ಮುಖ್ಯ ಮಂತ್ರಿ ಆದವರು ಇಂತಹ ಸಂದರ್ಭದಲ್ಲಿ ತಮ್ಮ ಸ್ಥಾನ ಮಾನ ಗೌರವಉಳಿಸಿಕೊಳ್ಳಲೇ ಬೇಕು. ಮುಖ್ಯ ಮಂತ್ರಿ ಯಾದವ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕತ೯ನ ರೀತಿಯಲ್ಲಿ ಇಂತಹ ಪ್ರತಿಭಟನೆಯಲ್ಲಿ ಭಾಗವಹಿಸಿ ಮುಜುಗುರಕ್ಕೆ ಒಳಗಾಗ ಬಾರದು..ಇಂತಹ ಘನ ಗಂಭೀರದ ನಡೆಯನ್ನು ಮಾಜಿ ಮುಖ್ಯ ಮಂತ್ರಿ ದಿ.ಎಸ್.ಎಂ.ಕೃಷ್ಣ ಅವರಿಂದ ಕಲಿತು ಕೊಳ್ಳ ಬೇಕು.ಕರಾವಳಿಯ ಜಿಲ್ಲೆಯ ಪವಿತ್ರವಾದ ದಸರಾ ಕಾಯ೯ಕ್ರಮವನ್ನೆಲ್ಲ ಬಿಟ್ಟು ದೆಹಲಿಗೆ ಹೇೂಗಿ ಈ ಪ್ರತಿಭಟನೆ ಯಲ್ಲಿ ಭಾಗವಹಿಸುವ ಅನಿವಾರ್ಯತೆಯಾದರೂ ಎನ್ನಿತ್ತು ಅನ್ನುವ ಪ್ರಶ್ನೆ ಕರಾವಳಿಯ ಜನರ ಮೂಲ ಭೂತ ಪ್ರಶ್ನೆ ? ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ.