ಹಿರಿಯಡ್ಕ: ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಶ್ರೀ ರಾಮ್ ಟೈಗರ್ಸ್ ಕೊಣ್ದಾಡಿ-ಕೊಟ್ನಕಟ್ಟೆ ವತಿಯಿಂದ, ಶ್ರೀ ಕಾಳಿಕಾಂಬಾ ಈವೆಂಟ್ ಡೆಕೋರೇಷನ್ ಸಹಯೋಗದಲ್ಲಿ ಅಕ್ಟೋಬರ್ 21ರಂದು ರೀಲ್ಸ್ ಸ್ಪರ್ಧೆ ಆಯೋಜಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವವರು ಗರಿಷ್ಠ 90 ಸೆಕೆಂಡುಗಳ ರೀಲ್ಸ್ ವಿಡಿಯೊ ತಯಾರಿಸಬೇಕು.
ಮೊಬೈಲ್ ಫೋನ್ ಅಥವಾ ವೃತ್ತಿಪರ ಕ್ಯಾಮೆರಾ ಬಳಸಿ ವಿಡಿಯೊ ಚಿತ್ರೀಕರಿಸಬಹುದು. ಸ್ಪರ್ಧಿಗಳು ತಮ್ಮ ರೀಲ್ಸ್ ಅನ್ನು @s.r.t_kondaadi_kotnakatte ಇನ್ಸ್ಟಾಗ್ರಾಂ ಖಾತೆಯೊಂದಿಗೆ ಕೊಲ್ಯಾಬ್ ಮಾಡುವುದು ಹಾಗೂ ಆ ಖಾತೆಯನ್ನು ಫಾಲೋ ಮಾಡುವುದು ಕಡ್ಡಾಯವಾಗಿದೆ.
ಪ್ರತಿ ಸ್ಪರ್ಧಿಗೆ ಒಂದು ರೀಲ್ಸ್ ಸಲ್ಲಿಸಲು ಮಾತ್ರ ಅವಕಾಶವಿದ್ದು, ವಿಡಿಯೊದಲ್ಲಿ ಹುಲಿವೇಷದ ಚಿತ್ರಕಲೆಯನ್ನು ಸೇರಿಸುವುದು ಐಚ್ಛಿಕವಾಗಿದೆ. ಸ್ಪರ್ಧಿಗಳು ತಮ್ಮ ರೀಲ್ಸ್ ಅನ್ನು ಅಕ್ಟೋಬರ್ 21ರ ರಾತ್ರಿ 10 ಗಂಟೆಯೊಳಗೆ ಸಲ್ಲಿಸಬೇಕು. ಅದೇ ದಿನ ವಿಜೇತರನ್ನು ಘೋಷಿಸಲಾಗುವುದು.
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ₹3,000 ಹಾಗೂ ದ್ವಿತೀಯ ಬಹುಮಾನವಾಗಿ ₹2,000 ನಗದು ಬಹುಮಾನ ನೀಡಲಾಗುತ್ತದೆ. ಸ್ಪರ್ಧಿಗಳ ಸೃಜನಶೀಲತೆ, ಸ್ವಂತಿಕೆ, ವಿಡಿಯೊ ಗುಣಮಟ್ಟ, ಪ್ರಸ್ತುತಿ, ಎಡಿಟಿಂಗ್, ಪರಿಕಲ್ಪನೆ, ಕಾರ್ಯಗತಗೊಳಿಸುವಿಕೆ ಹಾಗೂ ಒಟ್ಟಾರೆ ಪರಿಣಾಮವನ್ನು ಪರಿಗಣಿಸಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿಗಾಗಿ 9686425469 ಸಂಖ್ಯೆಯನ್ನು ಸಂಪರ್ಕಿಸಬಹುದು.















