ಶ್ರೀ ಶಾರದಾ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ವತಿಯಿಂದ ಅ. 12 ರಂದು  ವೇದಿಕ ಗಣಿತದ ಸೂಪರ್‌ಫಾಸ್ಟ್ ಲೆಕ್ಕಾಚಾರ ಕಾರ್ಯಾಗಾರ,ಏನೆಲ್ಲಾ ಕಲಿಯಬಹುದು?

ಮಣಿಪಾಲ: ಶ್ರೀ ಶಾರದಾ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ವತಿಯಿಂದ ವೇದಿಕ ಗಣಿತ ಹಾಗೂ ವೇಗದ ಲೆಕ್ಕಾಚಾರ ಕೌಶಲ್ಯಗಳನ್ನು ಕಲಿಸುವ ವಿಶೇಷ ಕಾರ್ಯಾಗಾರವನ್ನು ಅಕ್ಟೋಬರ್ 12ರಂದು ಆಯೋಜಿಸಲಾಗಿದೆ.

ಚೌಕತ್‌ನ MIT ಗೇಟ್ 4ರ ಸಮೀಪ ನಡೆಯಲಿರುವ ಕಾರ್ಯಾಗಾರವು ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ನಡೆಯಲಿದೆ. ಮಾನಸಿಕ ಗಣಿತದ ಸುಲಭ ವಿಧಾನಗಳು, ವೇಗವಾಗಿ ಸಮಸ್ಯೆಗಳನ್ನು ಪರಿಹರಿಸುವ ತಂತ್ರಗಳು ಹಾಗೂ ಲೆಕ್ಕಾಚಾರದಲ್ಲಿ ವೇಗ ಮತ್ತು ನಿಖರತೆ ಹೆಚ್ಚಿಸುವ ಪ್ರಾಯೋಗಿಕ ವಿಧಾನಗಳನ್ನು ಕಾರ್ಯಾಗಾರದಲ್ಲಿ ಪರಿಚಯಿಸಲಾಗುತ್ತದೆ.

ವಿದ್ಯಾರ್ಥಿಗಳಲ್ಲಿ ಲೆಕ್ಕಾಚಾರದ ಮೇಲಿನ ಆತ್ಮವಿಶ್ವಾಸ ಬೆಳೆಸುವುದು ಹಾಗೂ ಸುಲಭ ಮತ್ತು ವೇಗವಾಗಿ ಗಣಿತ ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯವನ್ನು ಬೆಳೆಸುವುದು ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ.

ನೋಂದಣಿ ಶುಲ್ಕ ₹499 ಮಾತ್ರ. ಆಸಕ್ತರಿಗೆ ಸೀಮಿತ ಸಂಖ್ಯೆಯಲ್ಲಿ ಅವಕಾಶವಿದ್ದು, ಹೆಚ್ಚಿನ ಮಾಹಿತಿಗಾಗಿ 99017 22527 / 82775 71883 ಸಂಪರ್ಕಿಸಬಹುದು. ಕಾರ್ಯಾಗಾರವನ್ನು ಶ್ರೀ ಶಾರದಾ ಟ್ರೈನಿಂಗ್ ಇನ್‌ಸ್ಟಿಟ್ಯೂಟ್, ಮಣಿಪಾಲ ಆಯೋಜಿಸಿದೆ.