ಎಂಐಟಿಕೆ – ಎ ಐ ವಿಷನ್ 24H’ ರಾಷ್ಟ್ರೀಯ ಮಟ್ಟದ 24 ಗಂಟೆಗಳ ಹ್ಯಾಕಥಾನ್.

ಕುಂದಾಪುರ: ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕುಂದಾಪುರ(MITK) ವತಿಯಿಂದ “MITK AI VISION 24H – ರಾಷ್ಟ್ರೀಯ ಮಟ್ಟದ 24 ಗಂಟೆಗಳ ಹ್ಯಾಕಥಾನ್” ಅನ್ನು 9 ಮತ್ತು 10 ಅಕ್ಟೋಬರ್ 2026 ರಂದು ಎಂ ಐ ಟಿ ಕುಂದಾಪುರದ ದಲ್ಲಿ ಆಯೋಜಿಸಲಾಗಿದೆ.

ವಿದ್ಯಾರ್ಥಿಗಳು ಮತ್ತು ಯುವ ನವೋದ್ಯಮಿಗಳಲ್ಲಿ ಕೃತಕ ಬುದ್ಧಿಮತ್ತೆ (AI), ನವೀನ ಚಿಂತನೆ, ಸೃಜನಶೀಲತೆ, ತಾಂತ್ರಿಕ ಕೌಶಲ್ಯಗಳು ಹಾಗೂ ಸಮಸ್ಯೆ ಪರಿಹರಿಸುವ ಸಾಮರ್ಥ್ಯಗಳನ್ನು ಉತ್ತೇಜಿಸುವುದು ಈ ಹ್ಯಾಕಥಾನ್‌ನ ಪ್ರಮುಖ ಉದ್ದೇಶವಾಗಿದೆ. ದೇಶದ ವಿವಿಧ ಶಿಕ್ಷಣ ಸಂಸ್ಥೆಗಳಿಂದ ಭಾಗವಹಿಸುವ ವಿದ್ಯಾರ್ಥಿಗಳು 24 ಗಂಟೆಗಳ ಅವಧಿಯಲ್ಲಿ ನೈಜ ಜೀವನದ ಸಮಸ್ಯೆಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಿ, ತಮ್ಮ ಆಲೋಚನೆಗಳನ್ನು ಕಾರ್ಯನಿರ್ವಹಿಸುವ ಮಾದರಿಗಳಾಗಿ ರೂಪಿಸಲಿದ್ದಾರೆ.

ಈ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್‌ಗೆ ದೇಶದ ವಿವಿಧ ಶಿಕ್ಷಣ ಸಂಸ್ಥೆಗಳಿಂದ ಒಟ್ಟು 108 ತಂಡಗಳು ನೋಂದಾಯಿಸಿಕೊಂಡಿದ್ದು ಅಂತಿಮ ಹಂತಕ್ಕೆ 26 ಉತ್ತಮ ತಂಡಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ 26 ತಂಡಗಳನ್ನು ಎಂ ಐ ಟಿ ಕುಂದಾಪುರದಲ್ಲಿ ನಡೆಯುವ 24 ಗಂಟೆಗಳ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್‌ನಲ್ಲಿ ನವೀನ ಪರಿಹಾರಗಳನ್ನು ಅಭಿವೃದ್ಧಿಪಡಿಸಿ, ತಜ್ಞರು ಮತ್ತು ವೃತ್ತಿಪರರ ಮುಂದೆ ತಮ್ಮ ಮಾದರಿಗಳನ್ನು ಪ್ರಸ್ತುತಪಡಿಸಲು ಅವಕಾಶ ದೊರೆಯಲಿದೆ. ಆಕರ್ಷಕ ಬಹುಮಾನಗಳು ಹಾಗೂ ಮನ್ನಣೆಗಳು ವಿದ್ಯಾರ್ಥಿಗಳನ್ನು ತಮ್ಮ ನವೀನತೆ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಮತ್ತಷ್ಟು ಪ್ರೋತ್ಸಾಹಿಸಲಿವೆ.
ಈ ಹ್ಯಾಕಥಾನ್ ಅನ್ನು ಐ ಐ ಐ ಟಿ ಧಾರವಾಡ, ಕಾಮ್ವಾಲ್ಟ್,ನೈನ್ ಹಾಗೂ ಎಂ ಐ ಟಿ ಕೆಯ ಉದ್ಯಮ್ X, ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದೆ.