ಧರ್ಮಸ್ಥಳ: ಸೌಜನ್ಯಾ ಪ್ರಕರಣದ ಮರುತನಿಖೆ: ಎಸ್‌ಐಟಿ ತಂಡಕ್ಕೆ 16 ಮಂದಿ ಸಹಾಯಕ ಅಧಿಕಾರಿಗಳ ನೇಮಕ!

ಮಂಗಳೂರು: ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗಾಗಿ ಸುಪ್ರೀಂಕೋರ್ಟ್ ಆದೇಶದಂತೆ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ (SIT) 16 ಮಂದಿ ಸಹಾಯಕ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಈ ಕುರಿತು ಡಿಜಿ ಮತ್ತು ಐಜಿಪಿ ಡಾ. ಎಂ.ಎ. ಸಲೀಂ ಅವರು ಸೆ.29ರಂದು ಆದೇಶ ಹೊರಡಿಸಿದ್ದಾರೆ.

ಪ್ರಕರಣದ ಮರುತನಿಖೆಗಾಗಿ ಐವರು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ತಂಡವನ್ನು ಸೆ.24ರಂದು ರಾಜ್ಯ ಸರ್ಕಾರ ರಚಿಸಿತ್ತು. ಐಪಿಎಸ್ ಅಧಿಕಾರಿ ಎನ್. ಶಶಿಕುಮಾರ್ ಅವರನ್ನು ಎಸ್‌ಐಟಿ ಮುಖ್ಯಸ್ಥರನ್ನಾಗಿ ನೇಮಿಸಲಾಗಿದ್ದು, ಮಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ, ಬೆಂಗಳೂರು ರಾಜ್ಯ ಗುಪ್ತ ವಾರ್ತೆ ವಿಭಾಗದ ನಿಶಾ ಜೇಮ್ಸ್, ಬೆಂಗಳೂರು ಸಿಐಡಿ ಪೊಲೀಸ್ ಅಧೀಕ್ಷಕ ಲೋಕೇಶ್ ಜಗಲ್ಸಾರ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವೆಂಕಟೇಶ್ ಪ್ರಸನ್ನ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿತ್ತು.

ಎಸ್‌ಐಟಿ ತಂಡಕ್ಕೆ ನೇಮಕಗೊಂಡ 16 ಮಂದಿ

ಮರುತನಿಖೆಗೆ ಸಹಾಯ ಮಾಡುವ ಉದ್ದೇಶದಿಂದ 16 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಅವರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಗಳಿಂದ ತಕ್ಷಣವೇ ಬಿಡುಗಡೆಗೊಂಡು ಬೆಂಗಳೂರಿನಲ್ಲಿ ಎಸ್‌ಐಟಿ ತಂಡದ ಮುಂದೆ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ನೇಮಕಗೊಂಡವರ ವಿವರ:

  • ಮಂಗಳೂರು ನಗರ ಸಿಸಿಬಿ ಎಸಿಪಿ ಮನೋಜ್ ಕುಮಾರ್ ನಾಯಕ್
  • ಬೆಂಗಳೂರು ಸಿಸಿಬಿ ಎಸಿಪಿ ರಾಮಚಂದ್ರ ಬಿ.
  • ಸಿಐಡಿ ಇನ್ಸ್‌ಪೆಕ್ಟರ್ ದೀಪಕ್
  • ಇನ್ಸ್‌ಪೆಕ್ಟರ್ ಮೋಹನ್ ಡಿ. ಪಾಟೀಲ್
  • ಮಡಿವಾಳ ಸಂಚಾರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಈಶ್ವರಿ
  • ಕೊಣಾಜೆ ಪೊಲೀಸ್ ಠಾಣೆ ಪಿಎಸ್ಐ ಪುನೀತ್ ಗಾವಂಕರ್
  • ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ ಪ್ರದೀಪ್
  • ಕಂಕನಾಡಿ ಪೊಲೀಸ್ ಠಾಣೆ ಪಿಎಸ್ಐ ಅನಿತಾ ನಿಕಂ
  • ಮಂಗಳೂರು ಸಿಸಿಬಿ ಎಎಸ್‌ಐ ಮೋಹನ್
  • ಕಂಕನಾಡಿ ಪೊಲೀಸ್ ಠಾಣೆ ಸಿಬ್ಬಂದಿ ಪ್ರದೀಪ್ ಕುಮಾರ್ ರೈ
  • ಗೋವರ್ಧನ್
  • ದಿನೇಶ್ ಎನ್.
  • ಉಳ್ಳಾಲ ಪೊಲೀಸ್ ಠಾಣೆ ಸಿಬ್ಬಂದಿ ರಾಧಾಕೃಷ್ಣ ಕೆ.ಕೆ.
  • ಕಾವೂರು ಪೊಲೀಸ್ ಠಾಣೆ ಸಿಬ್ಬಂದಿ ರೆಜಿ ವಿ.ಎಂ.
  • ಸುರತ್ಕಲ್ ಪೊಲೀಸ್ ಠಾಣೆ ಸಿಬ್ಬಂದಿ ರಾಜೇಂದ್ರ ಪ್ರಸಾದ್ ವಿ.ಪಿ.
  • ಕಂಕನಾಡಿ ಪೊಲೀಸ್ ಠಾಣೆ ಮಹಿಳಾ ಸಿಬ್ಬಂದಿ ಪ್ರಮೀಳ

ಈ 16 ಮಂದಿ ಎಸ್‌ಐಟಿ ತನಿಖಾ ತಂಡಕ್ಕೆ ಅಗತ್ಯ ತನಿಖಾ ಸಹಕಾರ ನೀಡಲಿದ್ದು, ಪ್ರಕರಣದ ಮರುತನಿಖೆ ಬೆಂಗಳೂರಿನಲ್ಲಿ ನಡೆಯಲಿದೆ.