ಎಸ್ಎಂಎಸ್ ಫೈನಾನ್ಶಿಯಲ್ ಸರ್ವಿಸ್ ರಜತ ಮಹೋತ್ಸವ ಉಡುಪಿ

ಉಡುಪಿ ಎಸ್.ಎಂ.ಎಸ್. ಫೈನಾನ್ನಿ ಯಲ್ ಸರ್ವಿಸ್‌ನ ರಜತ ಮಹೋತ್ಸವ ಕಾರ್ಯಕ್ರಮ ಉಡುಪಿ ಕಿದಿಯೂರ್ ಹೋಟೆಲ್‌ನ ಶೇಷ ಶಯನ ಸಭಾಂಗಣದಲ್ಲಿ ನಡೆಯಿತು.
ಕರ್ಣಾಟಕ ಬ್ಯಾಂಕ್ ಉಡುಪಿ ಎಜಿಎಂ ಮತ್ತು ರೀಜನಲ್ ಹೆಡ್ ರಮೇಶ್ ವೈದ್ಯ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಡುಪಿಯ ರೀಜನಲ್ ಮ್ಯಾನೇಜರ್ ಬಿ. ಪ್ರಕಾಶ್ ಅಡಿಗ, ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ಸಂಸ್ಥೆಯ 25 ವರ್ಷಗಳ ಕಾರ್ಯವೈಖರಿಯನ್ನು ಶ್ಲಾಘಿಸಿ, ಶುಭ ಹಾರೈಸಿದರು.
ಯೂನಿಯನ್ ಬ್ಯಾಂಕ್ ಉಡುಪಿ ಎಜಿಎಂ ಮತ್ತು ರೀಜನಲ್ ಹೆಡ್ ಅಶೋಕ ಅಂಬಾಸ ಭಾಂಡಗೆ, ಉದ್ಯಮಿ ಸಂದೀಪ್ ಮಂಜ, ಬಜಾಜ್ ಫೈನಾನ್ಸ್ ಬ್ಯುಸಿನೆಸ್ ಹೆಡ್ ಶಿವ ಕುಮಾರ್ ಚಿಕ್ಕಯ್ಯ, ಬಜಾಜ್ ಫೈನಾನ್ಸ್ ನ್ಯಾಷನಲ್ ಮುಖ್ಯಸ್ಥ ಅಜಿತ್ ರೈ, ಸ್ಟೇಟ್
ಉಡುಪಿ ಎಸ್‌ಎಂಎಸ್‌ ಫೈನಾನ್ಶಿಯಲ್ ಸರ್ವಿಸ್‌ನ ರಜತ ಮಹೋತ್ಸವ ಕಾಠ್ಯಕ್ರಮ ನಡೆಯಿತು.
ಬ್ಯಾಂಕ್ ಆಫ್ ಇಂಡಿಯಾ ಚೀಫ್ ಮ್ಯಾನೇಜರ್ ಕೆ. ಕೃಷ್ಣರಾಜ ಭಟ್, ಕ್ಲಸ್ಟರ್ ಮ್ಯಾನೇಜರ್ ಭರತೇಶ್ ಶೆಟ್ಟಿ ಗೋದ್ರೇಜ್ ಕ್ಯಾಪಿಟಲ್‌ನ ಲೀಲಾಕೃಷ್ಣ ಉದ್ಯಮಿ ಜಯಪ್ರಕಾಶ್ ಶೆಟ್ಟಿ ಕರ್ನಾಟಕ ಕ್ಯಾಶ್ ಮ್ಯಾನ್ಯೂಫ್ಯಾಕ್ಟರ್ ಅಸೋಸಿ ಯೇಶನ್ ಮಂಗಳೂರು ಅಧ್ಯಕ್ಷ ಅನಂತಕೃಷ್ಣ ರಾವ್, ಎಸ್.ಎಂ.ಎಸ್. ಫೈನಾನ್ಶಿಯಲ್ ಸರ್ವಿಸ್‌ನ ಮಾಲೀಕ ಸುಧೀಶ್ ನಾಯಕ್, ಎಸ್.ಎಂ.ಎಸ್. ಫೈನಾನ್ನಿ ಯಲ್ ಸರ್ವಿಸ್‌ನ ಸಲಹೆಗಾರ ರಾಘವೇಂದ್ರ ಐತಾಳ್, ಸಂಸ್ಥೆಯ ಹಿರಿಯ ಸಿಬ್ಬಂದಿ ಶ್ರೀಪತಿ ಆಚಾರ್ಯ, ಚಂದ್ರ ಶೇಖರ ಬ್ರಹ್ಮಾವರ, ಪ್ರಶಾಂತ್, ಸವಿತಾ ಆ‌ರ್. ರಶ್ಮಿ ಶೆಟ್ಟಿ, ನೈನಾ ಶೆಟ್ಟಿ ಉಪಸ್ಥಿತರಿದ್ದರು.
ಸಂಸ್ಥೆಗಾಗಿ ದುಡಿದ ಹಿರಿಯ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಸುಧೀಶ್ ನಾಯಕ್ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಸಂಸ್ಥೆಯ ಪ್ರತೀಕ್ಷಾ, ಪವಿತ್ರಾ, ರಶ್ಮಿ ನಾಯಕ್ ಸಹಕರಿಸಿದರು. ಮಹೇಶ್ ಮಲ್ಪೆ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಿಬ್ಬಂದಿ ಧನಂಜಯ ಸಾಲ್ಯಾನ್ ವಂದಿಸಿದರು.