ಉಡುಪಿ: ಮಾನಸಿಕ ಅಸ್ವಸ್ಥ ನಾಪತ್ತೆ

ಉಡುಪಿ: ಮಾನಸಿಕ ಹಾಗೂ ಮರೆವು ಖಾಯಿಲೆಯಿಂದ ಬಳಲುತ್ತಿದ್ದ ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮದ ಅರ್ಬಿ ನಿವಾಸಿ ಗಣಪತಿ ನಾಯ್ಕ್ (54) ಎಂಬ ವ್ಯಕ್ತಿಯು 2024 ರ ಅಕ್ಟೋಬರ್ 13 ರಂದು ಸಂಜೆ 7 ಗಂಟೆಯ ಸುಮಾರಿಗೆ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಹೋದವರು ಇದುವರೆಗೂ ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.

160 ಸೆಂ.ಮೀ ಎತ್ತರ, ಸಾಧಾರಣ ಶರೀರ, ಕಪ್ಪು ಮೈಬಣ್ಣ ಹೊಂದಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಪಿ.ಎಸ್ ದೂ.ಸಂಖ್ಯೆ: 0820-2570328, ಎಸ್.ಡಿ.ಪಿ.ಓ ದೂ.ಸಂಖ್ಯೆ: 0820-2521257, ಡಿ.ಪಿ.ಓ ದೂ.ಸಂಖ್ಯೆ: 0820-2534777 ಹಾಗೂ ರೇಂಜ್ ಮೊ.ನಂ: 8242220501 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಣಿಪಾಲ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.