ಉಡುಪಿ: ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಜಾರಿಗೊಳಿಸುತ್ತಿರುವ ವಿವಿಧ ಯೋಜನೆಗಳ ಜೊತೆಗೆ ಕಾರ್ಮಿಕ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳ ಮಾಹಿತಿಯನ್ನು ಪಡೆದುಕೊಂಡು ಸದುಪಯೋಗ ಪಡೆದುಕೊಳ್ಳಿ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್ ರವರು ಸಲಹೆ ನೀಡಿದರು.
ಅವರು ಉಡುಪಿಯ ಜಗನ್ನಾಥ ಸಭಾಭವನದಲ್ಲಿ ಉಡುಪಿ ಜಿಲ್ಲಾ ಗ್ಯಾರೇಜ್ ಮಾಲೀಕರ ಸಂಘ ಉಡುಪಿ ಇವರು ಆಯೋಜಿಸಿರುವ ವರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ, ಹಾಗು ರಿಕ್ಷಾ ಗ್ಯಾರೇಜುಗಳ ನೂತನ ದರಪಟ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡುತಿದ್ದರು.
ಉಡುಪಿ 1ನೇ ವೃತ್ತದ ಕಾರ್ಮಿಕ ನಿರೀಕ್ಷಕರಾದ ಸಂಜಯ್ ಎನ್ ಪಿ ಎಲ್ ರವರು ಕಾರ್ಮಿಕ ಇಲಾಖೆಯಲ್ಲಿ ಜಾರಿಯಲ್ಲಿರುವ ವಿವಿಧ ಯೋಜನೆಗಳ ಬಗ್ಗೆ ಮತ್ತು ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರೋಷನ್ ಕರ್ಕಡ ಕಾಪು ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು, ವೇಟ್ ಲಿಫ್ಟರ್ ಮಾಸ್ಟರ್ ಅನ್ಮೋಲ್ ಬೆನಿಡಿಕ್ಟ್ ಕರ್ಕಡ ಹಾಗು ವೃತ್ತಿ ಸಾಧಕ ನಿತಿನ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಈ ವರ್ಷದ ಸಾಲಿನಲ್ಲಿ ಹತ್ತನೇ ತರಗತಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳಲ್ಲಿ ತೆರ್ಗಡೆ ಹೊಂದಿದ ಸದಸ್ಯರ ಮಕ್ಕಳಾದ ಆಯುಷ್ ಜಿ ಅಮೀನ್, ಸೊಹನ್ ದೇವರಾಜ್ ಸುವರ್ಣ ಭವೇಶ್ ಜಯರಾಜ್ ಸುವರ್ಣ, ಕುಮಾರಿ ಅದಿತಿ ಎಸ್ ಸಾಲಿಯಾನ್, ಯಶಸ್ ಆಚಾರ್ಯ, ಕುಮಾರಿ ಖುಷಿ ವಸಂತ ಮೂಲ್ಯ, ಕುಮಾರಿ ಕೃಪಾ ಇವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಟಪಾಡಿ ನದಿಯಲ್ಲಿ ಗಾಳ ಹಾಕುವ ಸ್ಪರ್ಧೆಯಲ್ಲಿ ವಿಜೇತರಾದ ಸಂಘದ ಸದ್ಯಸ್ಯ ಸಂತೋಷ್ ಪೂಜಾರಿಯವರನ್ನು ಅಭಿನಂದಿಸಲಾಯಿತು.
ಕಾರ್ಮಿಕ ಇಲಾಖೆಯ ಸಿಬ್ಬಂದಿಯವರಾದ ಪ್ರಶಾಂತ್ ನಾಯ್ಕ್, ನಾರಾಯಣ ನಾಯ್ಕ , ಸಂಗಯ್ಯ ಹಿರೇಮಠ, ಸಂಘದ ಉಪಾದ್ಯಕ್ಷ ಕೃಷ್ಣ ಎಸ್ ಜಿ, ಸ್ಥಾಪಕ ಅಧ್ಯಕ್ಷ ಪ್ರಭಾಕರ್ ಕೆ. ಗೌರವ ಸಲಹೆಗಾರರಾದ ಯಾದವ ಶೆಟ್ಟಿಗಾರ್, ಉದಯಕಿರಣ್, ಜಯ ಸುವರ್ಣ,. ಕ್ರೀಡಾ ಕಾರ್ಯದರ್ಶಿಗಳಾದ ಮಧುಸೂಧನ್ ಕನ್ನರ್ಪಾಡಿ ಮತ್ತು ಸಂತೋಷ್ ಪೂಜಾರಿ ಕಾಪು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ ವಾರ್ಷಿಕ ವರದಿ ಓದಿ, ಕೋಶಾಧಿಕಾರಿ ಸಂತೋಷ್ ಕುಮಾರ್ ಲೆಕ್ಕ ಪತ್ರ ಮಂಡನೆ ಮಾಡಿದರು.
ಚಯರ್ ಮ್ಯಾನ್ ವಿಲ್ಸನ್ ಅಂಚನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾದ್ಯಕ್ಷರುಗಳಾದ ವಿನಯ್ ಕುಮಾರ್ ಕಲ್ಮಾಡಿ ಸ್ವಾಗತಿಸಿ ರಾಜೇಶ್ ಜತ್ತನ್ ವಂದಿಸಿದರು. ಪ್ರವೀಣ್ ಕುಮಾರ್ ನಿರೂಪಿಸಿದರು.















