ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಎಸ್ಎಂಎಸ್ ವಿದ್ಯಾರ್ಥಿಗಳ ಅಮೋಘ ಸಾಧನೆ; 9 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಬ್ರಹ್ಮಾವರ: ಕುಂದಾಪುರದ ಬಂಡಾರ್ಕರ್ಸ್ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕುಸ್ತಿ ಸ್ಪರ್ಧೆಯಲ್ಲಿ ಬ್ರಹ್ಮಾವರದ ಎಸ್ಎಂಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಪ್ರದರ್ಶನ ನೀಡಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ವಿವಿಧ ತೂಕದ ವಿಭಾಗಗಳಲ್ಲಿ ನಡೆದ ಫ್ರೀಸ್ಟೈಲ್ ಹಾಗೂ ಗ್ರೀಕೋ-ರೋಮನ್ ವಿಭಾಗಗಳಲ್ಲಿ SMS ಕಾಲೇಜಿನ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ. ಇವರಲ್ಲಿ 9 ವಿದ್ಯಾರ್ಥಿಗಳು ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಗೆ ಆಯ್ಕೆಯಾಗಿರುವುದು ಕಾಲೇಜಿನ ಕ್ರೀಡಾ ಸಾಧನೆಗೆ ಮತ್ತೊಂದು ಹೆಮ್ಮೆಯ ಗರಿಯಾಗಿದೆ.

ಚಿನ್ನದ ಪದಕ ಪಡೆದವರಲ್ಲಿ ಮೆರಿಲ್ (50 ಕೆ.ಜಿ. ಫ್ರೀಸ್ಟೈಲ್), ಮಂದಾರ (59 ಕೆ.ಜಿ. ಫ್ರೀಸ್ಟೈಲ್), ಅನನ್ಯ (68 ಕೆ.ಜಿ. ಫ್ರೀಸ್ಟೈಲ್), ಸುಕನ್ಯಾ (76 ಕೆ.ಜಿ. ಫ್ರೀಸ್ಟೈಲ್), ಸಾಯಿ ಸುಮುಕ್ (57 ಕೆ.ಜಿ. ಫ್ರೀಸ್ಟೈಲ್), ಶ್ರೀಕರ್ (65 ಕೆ.ಜಿ. ಫ್ರೀಸ್ಟೈಲ್), ನಂದನ್ (86 ಕೆ.ಜಿ. ಫ್ರೀಸ್ಟೈಲ್), ಶರಣ್ (97 ಕೆ.ಜಿ. ಫ್ರೀಸ್ಟೈಲ್) ಹಾಗೂ ರಂಜನ್ (120+ ಕೆ.ಜಿ. ಗ್ರೀಕೋ-ರೋಮನ್) ಸೇರಿದ್ದಾರೆ.ಬೆಳ್ಳಿ ಪದಕವನ್ನು ವೆಲ್ಸಾ (57 ಕೆ.ಜಿ. ಫ್ರೀಸ್ಟೈಲ್), ಝಯೀಮ್ (61 ಕೆ.ಜಿ. ಫ್ರೀಸ್ಟೈಲ್), ರಾಯ್ಸನ್ (120 ಕೆ.ಜಿ. ಫ್ರೀಸ್ಟೈಲ್), ಲಿಖಿತ್ (67 ಕೆ.ಜಿ. ಗ್ರೀಕೋ-ರೋಮನ್), ಸೃಜನ್ (77 ಕೆ.ಜಿ. ಗ್ರೀಕೋ-ರೋಮನ್), ದೇವನೀತ್ (87 ಕೆ.ಜಿ. ಗ್ರೀಕೋ-ರೋಮನ್) ಹಾಗೂ ಯಾಸಿನ್ (97 ಕೆ.ಜಿ. ಗ್ರೀಕೋ-ರೋಮನ್) ಪಡೆದುಕೊಂಡಿದ್ದಾರೆ.

ಕಂಚಿನ ಪದಕವನ್ನು ಶ್ರೀರಕ್ಷಾ (50 ಕೆ.ಜಿ. ಫ್ರೀಸ್ಟೈಲ್), ಕೃತಿಕಾ (55 ಕೆ.ಜಿ. ಫ್ರೀಸ್ಟೈಲ್), ಶಶಿಧರ್ (74 ಕೆ.ಜಿ. ಫ್ರೀಸ್ಟೈಲ್), ನಾಗರಾಜ್ (55 ಕೆ.ಜಿ. ಗ್ರೀಕೋ-ರೋಮನ್) ಹಾಗೂ ಅಭಿನವ್ (63 ಕೆ.ಜಿ. ಗ್ರೀಕೋ-ರೋಮನ್) ತಮ್ಮದಾಗಿಸಿಕೊಂಡಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟಕ್ಕೆ ಆಯ್ಕೆಯಾದ 9 ವಿದ್ಯಾರ್ಥಿಗಳ ಸಾಧನೆಗೆ ಎಸ್ಎಂಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯಮಟ್ಟದಲ್ಲಿಯೂ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಕಾಲೇಜಿಗೆ ಕೀರ್ತಿ ತರಲಿ ಎಂದು ಶುಭ ಹಾರೈಸಿದ್ದಾರೆ.