Bengaluru-Crime News: ಬೆಂಗಳೂರಲ್ಲಿ ಪತ್ನಿಯ ಮೇಲೆ ಆ್ಯಸಿಡ್ ದಾಳಿ, ಜನರ ಮುಂದೆಯೇ ಮಚ್ಚಿನಿಂದಲೂ ಕೊಚ್ಚಿದ ಪಾಪಿ

    ಕ್ಲಿನಿಕ್ ಬಳಿ ಬೈಕ್​ನಲ್ಲಿ ಬಂದ ವೆಂಕಟೇಶ್ ಎಂಬಾತ ಹೆಂಡ್ತಿ ಮೇಲೆ ಆ್ಯಸಿಡ್ ಎರಚಿ ಬಳಿಕ ಮಚ್ಚಿನಿಂದ ಮನಸೋಇಚ್ಛೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. 

    ಬೆಂಗಳೂರು (ಸೆ.17): ನೂರಾರು ಜನರು ಓಡಾಡುವ ರಸ್ತೆಯಲ್ಲೇ ಭೀಕರ ಘಟನೆ ಸಂಭವಿಸಿದ್ದು, ಬೆಂಗಳೂರಿನ (Bengaluru) ಜೆಪಿ ನಗರದ 3rd ಪೇಸ್​ನ ನಾರಾಯಣ ಕ್ಲಿನಿಕ್ ಬಳಿ ಆ್ಯಸಿಡ್​ ದಾಳಿ (Acid Attack) ಆಗಿದೆ. ನರ್ಸ್ ಮಧುಮಿತ ಎಂಬುವವರ ಮೇಲೆ ಆಕೆಯ ಗಂಡನೇ ಆ್ಯಸಿಡ್​ ಎರಚಿದ್ದು, ಬಳಿಕ ಮುಚ್ಚಿನಿಂದ ಮನಸೋಇಚ್ಛೆ ಹಲ್ಲೆ ನಡೆಸಿದ್ದಾನೆ. ರಕ್ಷಣೆಗೆ ಬಂದ ಸ್ಥಳೀಯರ ಮೇಲೂ ಈತ ಹಲ್ಲೆ ನಡೆಸಿದ್ದು, ಕೃತ್ಯ ಕಂಡು ಜನರು ಬೆಚ್ಚಿಬಿದ್ದಿದ್ದಾರೆ.

    ಪತ್ನಿಯ ಮೇಲೆ ಆ್ಯಸಿಡ್ ದಾಳಿ!

    ಜೆಪಿ ನಗರದ ನಾರಾಯಣ ಕ್ಲಿನಿಕ್​​ನಲ್ಲಿ ನರ್ಸ್​ ಆಗಿದ್ದ ಮಧುಮಿತ ಅವರು ಒಂದೂವರೆ ವರ್ಷಗಳಿಂದಲೂ ಅಲ್ಲೇ ಕೆಲಸ ಮಾಡ್ತಿದ್ರಂತೆ. ಇಂದು ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಬಂದ ಮಧುಮಿತ ಅವರು, ಪಾರ್ಕಿಂಗ್ ವಿಚಾರಕ್ಕೆ ಜಗಳ ಮಾಡಿಕೊಂಡಿದ್ರು. ಬಳಿಕ ತಿಂಡಿ ತಿನ್ನಲು ಹೊರಗೆ ಹೋಗಿದ್ದು, ವಾಪಸ್​ ಬರುವಾಗ ಆತನ ಗಂಡನೇ ಹೆಂಡ್ತಿ ಮೇಲೆ ಆ್ಯಸಿಡ್​ ದಾಳಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

    ಬೈಕ್​ನಿಂದ ಬಂದು ಕೃತ್ಯ

    ಕ್ಲಿನಿಕ್ ಬಳಿ ಬೈಕ್​ನಲ್ಲಿ ಬಂದ ವೆಂಕಟೇಶ್ ಎಂಬಾತ ಹೆಂಡ್ತಿ ಮೇಲೆ ಆ್ಯಸಿಡ್ ಎರಚಿ ಬಳಿಕ ಮಚ್ಚಿನಿಂದ ಮನಸೋಇಚ್ಛೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಗಂಭೀರವಾಗಿ ಗಾಯಗೊಂಡ ಮಧುಮಿತಾಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.