ಮಣಿಪಾಲ: MSDC – Orane International ವತಿಯಿಂದ ಸೆ.19 ರಂದು ‘ಬ್ಯೂಟಿ & ವೆಲ್‌ನೆಸ್’ ಸ್ಪರ್ಧೆ: ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದೊಳ್ಳೆ ಚಾನ್ಸ್!

ಮಣಿಪಾಲ: MSDC ಹಾಗೂ Orane International School of Beauty & Wellness ವತಿಯಿಂದ ಸೌಂದರ್ಯ ಮತ್ತು ಕ್ಷೇಮ ಕ್ಷೇತ್ರದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ‘Beauty & Wellness’ ಸ್ಪರ್ಧೆಯನ್ನು ಸೆ.19ರಂದು ಆಯೋಜಿಸಲಾಗಿದೆ.

ಸ್ಪರ್ಧೆಯಲ್ಲಿ ನೈಲ್ ಆರ್ಟ್, ಆರ್ಗ್ಯಾನಿಕ್ ಫೇಸ್ ಪ್ಯಾಕ್/ಮಾಸ್ಕ್ ಅಪ್ಲಿಕೇಶನ್ ಹಾಗೂ ಮೆಹಂದಿ ಡಿಸೈನಿಂಗ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ನೈಲ್ ಆರ್ಟ್ ಸ್ಪರ್ಧೆಯಲ್ಲಿ ಸ್ಪರ್ಧಾರ್ಥಿಗಳು ತಮ್ಮದೇ ಮಾದರಿ ಹಾಗೂ ನೈಲ್ ಆರ್ಟ್ ಉತ್ಪನ್ನಗಳು ಮತ್ತು ಉಪಕರಣಗಳನ್ನು ತರಬೇಕಾಗಿದೆ. ಆರ್ಗ್ಯಾನಿಕ್ ಫೇಸ್ ಪ್ಯಾಕ್ ಸ್ಪರ್ಧೆಗೆ ವಾಲಂಟಿಯರ್ ಮಾಡೆಲ್ ಹಾಗೂ ಅಗತ್ಯ ಸಾಮಗ್ರಿಗಳನ್ನು ತರಬೇಕಾಗುತ್ತದೆ.

ಮೆಹಂದಿ ಡಿಸೈನಿಂಗ್ ಸ್ಪರ್ಧೆಯಲ್ಲಿ 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗ ಹಾಗೂ PUC ಮತ್ತು ಪದವಿ ವಿದ್ಯಾರ್ಥಿಗಳಿಗೆ ಮತ್ತೊಂದು ವಿಭಾಗ ಇರಲಿದೆ.

ಪ್ರತಿ ವಿಭಾಗದಲ್ಲೂ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲು ₹100 ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. ಶಾಲೆ, ಕಾಲೇಜು ಹಾಗೂ ಸಂಸ್ಥೆಗಳ ಮೂಲಕ ನೋಂದಾಯಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ನೋಂದಣಿ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ.

ಕಾರ್ಯಕ್ರಮವು ಮಣಿಪಾಲದ MSDC ಕಟ್ಟಡ, T.M. Pai Polytechnic Campus, Eshwaranagarದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 8123165068 ಸಂಪರ್ಕಿಸಬಹುದು. ನೋಂದಣಿಯನ್ನು ಶೀಘ್ರದಲ್ಲೇ ಮಾಡಿಕೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ.