ಉಡುಪಿ: ನಿರ್ಮಾಣ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡುತ್ತಿರುವ CREDAI ಉಡುಪಿ ಹಾಗೂ Association of Consulting Civil Engineers and Architects (ACCEA), Udupi ಸಂಸ್ಥೆಗಳು ಉಡುಪಿ ನಗರವನ್ನು ಇನ್ನಷ್ಟು ಸ್ವಚ್ಛ, ಹಸಿರು ಮತ್ತು ಸುಂದರ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಉಡುಪಿ ನಗರಸಭೆಯೊಂದಿಗೆ ಕೈಜೋಡಿಸಿವೆ.
ಇತ್ತೀಚೆಗೆ ಪರಿಸರ ದಿನಾಚರಣೆಯ ಅಂಗವಾಗಿ ಅಜ್ಜರಕಾಡಿನ ಸಸ್ಯಕಾಶೆಯಲ್ಲಿ ಗಿಡ ನೆಡುವ ಮೂಲಕ ‘ಸ್ವಚ್ಛ ಉಡುಪಿ – ಹಸಿರು ಉಡುಪಿ’ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಈ ಅಭಿಯಾನದ ಮುಂದುವರಿದ ಭಾಗವಾಗಿ, ಇಂದು ಇಂಜಿನಿಯರ್ಸ್ ಡೇ ಅಂಗವಾಗಿ ಉಡುಪಿ ನಗರಸಭೆಗೆ ಅಗತ್ಯವಿರುವ ಐದು Grass Cutting Machinesಗಳನ್ನು ಉಡುಗೊರೆಯಾಗಿ ನೀಡಲಾಯಿತು.
ಇವುಗಳಲ್ಲಿ ಮೂರು ಯಂತ್ರಗಳನ್ನು CREDAI ಉಡುಪಿ ಹಾಗೂ ಎರಡು ಯಂತ್ರಗಳನ್ನು ACCEA, Udupi ವತಿಯಿಂದ ನೀಡಲಾಗಿದ್ದು, ಉಡುಪಿ ನಗರಸಭೆಯ Environmental Engineering ಹಾಗೂ Health Departmentನ ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳ ಸಮ್ಮುಖದಲ್ಲಿ ನಗರಸಭೆಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ACCEA ಅಧ್ಯಕ್ಷರಾದ Er. Bhagavan Das K ಹಾಗೂ CREDAI ಉಡುಪಿ ಅಧ್ಯಕ್ಷರಾದ ಶ್ರೀ Sudhir Shetty ಅವರು,
“ಉಡುಪಿ ನಗರವು ಅಭಿವೃದ್ಧಿಯ ಜೊತೆಗೆ ಸ್ವಚ್ಛತೆ ಮತ್ತು ಹಸಿರಿನಲ್ಲಿಯೂ ಮಾದರಿ ನಗರವಾಗಬೇಕು ಎಂಬುದು ನಮ್ಮ ಆಶಯ. ನಗರಸಭೆಯೊಂದಿಗೆ ಕೈಜೋಡಿಸಿ ‘ಸ್ವಚ್ಛ ಉಡುಪಿ – ಹಸಿರು ಉಡುಪಿ’ ಅಭಿಯಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಲು CREDAI ಮತ್ತು ACCEA ಸದಾ ಸಿದ್ಧವಾಗಿವೆ. ನಗರಸಭೆಗೆ ಅಗತ್ಯವಿರುವ ತಾಂತ್ರಿಕ, ಮಾನವೀಯ ಹಾಗೂ ಇತರ ಸೂಕ್ತ ಸಹಕಾರವನ್ನು ನೀಡಲು ಎರಡೂ ಸಂಸ್ಥೆಗಳು ಮುಂದಿನ ದಿನಗಳಲ್ಲಿಯೂ ಸಿದ್ಧವಾಗಿವೆ.” ಈ ಸಂದರ್ಭದಲ್ಲಿ ACCEA ಹಾಗೂ CREDAI ಉಡುಪಿ ಸಂಸ್ಥೆಗಳ ಹಿರಿಯ ಪದಾಧಿಕಾರಿಗಳು ಹಾಗೂ ಸದಸ್ಯರಾದ ಆರ್ಕಿಟೆಕ್ಟ್ ಯೋಗೀಶ್ ಚಂದ್ರಧರ್, ಶ್ರೀ ಗಂಗಾಧರ್ ರಾವ್, ACCEA ಕಾರ್ಯದರ್ಶಿ Er. ಮಹೇಶ್ ಕಾಮತ್, ಖಜಾಂಚಿ Er. ಅಮಿತ್ ಅರವಿಂದ್,Er. ದೀಪಕ್, CREDAI ಉಡುಪಿ ಖಜಾಂಚಿ ಶ್ರೀ ಕೃಷ್ಣ ಭಟ್, ಶ್ರೀ ಗಣೇಶ್, ಶ್ರೀ ಪಾಂಡುರಂಗ ಆಚಾರ್ಯ, ಶ್ರೀ ನಂದಕಿಶೋರ್, ಶ್ರೀ ದಯಾನಂದ್ ಹಾಗೂ ಇತರ ಹಿರಿಯ ಸದಸ್ಯರು ಉಪಸ್ಥಿತರಿದ್ದರು.















