ಸಿದ್ಧಾಂತ್ ಫೌಂಡೇಶನ್ ವತಿಯಿಂದ ಬೋಧನೆಯಲ್ಲಿ “ಕೃತಕ ಬುದ್ದಿ ಮತ್ತೆ ಯ (AI) ತರಬೇತಿ

ಮಂಗಳೂರು : ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸತನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸಿದ್ಧಾಂತ್ ಫೌಂಡೇಶನ್ ಹಲವಾರು
ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅದರಂತೆ ಮಂಗಳೂರು ಹಾಗೂ ಸುತ್ತ ಮುತ್ತಲಿನ ಶಾಲಾ ಶಿಕ್ಷಕರಿಗಾಗಿ ಹಾಗೂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಿಗೆ , ಬೋಧನೆಯಲ್ಲಿ ಕೃತಕ ಬುದ್ದಿಮತ್ತೆ (ಎ ಐ ) ಯನ್ನು ಅಳವಡಿಸಿಕೊಳ್ಳುವುದರ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ತ್ರಿಶಾ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ಧಾಂತ್ ಫೌಂಡೇಶನ್ ನ ಅಧ್ಯಕ್ಷರಾದ ಶ್ರೀ ಸಿ ಎ ಗೋಪಾಲಕೃಷ್ಣ ಭಟ್ ಅವರು ವಹಿಸಿದ್ದರು.
“ಅವರು ಟೆಕ್ನಾಲಜಿ ಎಂಬುದು ನಮ್ಮ ಕೈ ಬೆರಳ ತುದಿಯಲ್ಲಿದೆ. ಇಂದು ಎಲ್ಲಾ ಕ್ಷೇತ್ರದಲ್ಲಿ (AI) ಕೃತಕ ಬುದ್ಧಿಮತ್ತೆಯನ್ನು
ಅಳವಡಿಸಿಕೊಳ್ಳಲಾಗುತ್ತಿದೆ. ಅದರಂತೆ ಶಿಕ್ಷಣ ಕ್ಷೇತ್ರದಲ್ಲಿಯೂ ಎಐ ಯನ್ನು ಅಳವಡಿಸಿಕೊಂಡು ಬೋಧನೆಯಲ್ಲಿ ನಾವೀನ್ಯತೆಯನ್ನು ತರಲು ಸಾಧ್ಯ. ತಂತ್ರಜ್ಞಾನವು ಶಿಕ್ಷಕರಿಗೆ ಪರ್ಯಾಯವಲ್ಲ ಅದು ಶಿಕ್ಷಕರ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ. ಆದರೆ ಬೋಧನೆಯಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮೂಲಕ ಬದಲಾವಣೆಯನ್ನು ತರಬಹುದು ” ಎಂದರು.
ಶ್ರೀ ರಾಮ ಮೂರ್ತಿ ಎಚ್ ಸಹಾಯಕ ಪ್ರಾಧ್ಯಾಪಕರು, ಕಂಪ್ಯೂಟರ್ ಅಪ್ಲಿಕೇಷನ್ ವಿಭಾಗ, ನಿಟ್ಟೆ ಇನ್ ಸ್ಟಿ ಟ್ಯೂಟ್ ಆಫ್
ಪ್ರೊಫೆಶನಲ್ ಎಜುಕೇಶನ್, ಮಂಗಳೂರು , ಇವರು ಈ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್
ನ್ನು ,ವಿವಿಧ ಆ್ಯಪ್ ಗಳನ್ನು ಬಳಸಿಕೊಂಡು ಪಠ್ಯ ಯೋಜನೆ, ಪಿ ಪಿ ಟಿ , ವಿವಿಧ ಚಟುವಟಿಕೆಗಳ ವೀಡಿಯೋ, ಬಜೆಟ್ ಮಾಡುವುದು, ವೃತ್ತಿಪರ ಪತ್ರ ತಯಾರಿಸುವುದು, ಇ ಮೇಲ್ ಕಳುಹಿಸುವುದು, ದಾಸ್ತಾವೇಜು ನಿರ್ವಹಿಸುವುದು ಇತ್ಯಾದಿಗಳ ಪ್ರಾತ್ಯಕ್ಷಿಕೆಯನ್ನು ನೀಡಿ ಎರಡು ಸೆಷನ್ ಗಳಲ್ಲಿ ಸಂಪೂರ್ಣವಾಗಿ ತಿಳಿಸಿದರು.
ವೇದಿಕೆಯಲ್ಲಿ ಸಿದ್ಧಾಂತ್ ಫೌಂಡೇಶನ್ ಶೈಕ್ಷಣಿಕ ಸಲಹೆಗಾರರಾದ ಡಾ ನಾರಾಯಣ ಕಾಯರ್ ಕಟ್ಟೆ ಯವರು ಉಪಸ್ಥಿತರಿದ್ದರು. ಮಂಗಳೂರಿನ ನೂರಕ್ಕೂ ಹೆಚ್ಟು ವಿವಿಧ ಪ್ರೌಢಶಾಲಾ ಶಿಕ್ಷಕರು ಹಾಗೂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃತಕ ಬುದ್ದಿಮತ್ತೆಯನ್ನು ಬೋಧನೆಯಲ್ಲಿ ಅಳವಡಿಸುವ ಸದುಪಯೋಗ ಪಡೆದುಕೊಂಡರು.
ಇದರಲ್ಲಿ ಪಾಲ್ಗೊಂಡ ಹಲವು ಶಿಕ್ಷಕರು ಈ ಕಾರ್ಯಕ್ರಮದ ಸದುದ್ದೇಶವನ್ನು ಮತ್ತು ಶಿಕ್ಷಕರಿಗೆ ಇದರಿಂದ ಆದ ಪ್ರಯೋಜನ ದ ಬಗ್ಗೆ ಮುಕ್ತ ಕಂಠದಿಂದ ಪ್ರಶಂಸಿಸಿದರು.
ತ್ರಿಶಾ ಕಾಲೇಜಿನ ಇಂಗ್ಲಿಷ್ ವಿಭಾಗದ ಅಧ್ಯಾಪಕಿ ಶ್ರೀಮತಿ ನವನೀತಾ ಸ್ವಾಗತಿಸಿದರು. ವಾಣಿಜ್ಯ ಶಾಸ್ತ್ರದ ಅಧ್ಯಾಪಕಿ ಶ್ರೀಮತಿ ಅನುಷಾ ಡಿ ಶೆಟ್ಟಿಯವರು ವಂದಿಸಿದರು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ವಾಣಿಜ್ಯ ಶಾಸ್ತ್ರದ ಅಧ್ಯಾಪಕಿ ಶ್ರೀಮತಿ ಸಹನಾ ಶೆಟ್ಟಿ ನಿರೂಪಿಸಿದರು.
ಭಾಗವಹಿಸಿದ ನೂರಕ್ಕೂ ಹೆಚ್ಚು ಶಿಕ್ಷಕರಿಗೆ ಹಾಗೂ ಉಪನ್ಯಾಸಕರಿಗೆ ಪ್ರಮಾಣ ಪತ್ರ ಹಾಗೂ ಸ್ಮರಣಿಕೆಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.