ಮಣಿಪಾಲ: ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಕೌಶಲ್ಯಾಭಿವೃದ್ಧಿ, ವೃತ್ತಿ ಮಾರ್ಗದರ್ಶನ ಮತ್ತು ಹೊಸ ಕೌಶಲ್ಯಗಳ ಕಲಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ MSDC ಕೌಶಲ್ ಮಣಿಪಾಲ ಸ್ಕಿಲ್ ಕ್ಲಬ್ ವತಿಯಿಂದ ಉಚಿತ ಸದಸ್ಯತ್ವ ನೋಂದಣಿ ಆರಂಭಿಸಲಾಗಿದೆ.
ಸ್ಕಿಲ್ ಕ್ಲಬ್ನ ಸದಸ್ಯತ್ವ ಪಡೆಯುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ವಿವಿಧ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳು ಮತ್ತು ಕಲಿಕಾ ಅವಕಾಶಗಳ ಜೊತೆಗೆ ₹3,000 ಮೌಲ್ಯದ ಸ್ಕಿಲ್ ರೂಪೀಸ್ ಗಿಫ್ಟ್ ವೋಚರ್ ಪಡೆಯುವ ಅವಕಾಶವಿದೆ.
ಸದಸ್ಯರಿಗೆ ಆನ್ಲೈನ್ ಪ್ರಮಾಣೀಕೃತ ಲೈವ್ ಇಂಟರಾಕ್ಟಿವ್ ಕೋರ್ಸ್ಗಳಿಗೆ 10ರಿಂದ 90ರಷ್ಟು ಕೋರ್ಸ್ ಶುಲ್ಕ ವಿದ್ಯಾರ್ಥಿವೇತನ, ಉಚಿತ ವೃತ್ತಿ ಮಾರ್ಗದರ್ಶನ ಹಾಗೂ ಕೌಶಲ್ಯಾಭಿವೃದ್ಧಿ, ರೀ-ಸ್ಕಿಲ್ಲಿಂಗ್ ಮತ್ತು ಅಪ್-ಸ್ಕಿಲ್ಲಿಂಗ್ಗಾಗಿ ಕೈಗೆಟುಕುವ ವೆಚ್ಚದಲ್ಲಿ ಜೀವಮಾನ ಸದಸ್ಯತ್ವದ ಸೌಲಭ್ಯ ದೊರೆಯಲಿದೆ.
ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಮತ್ತು ಭವಿಷ್ಯದ ವೃತ್ತಿಜೀವನಕ್ಕೆ ಸಿದ್ಧರಾಗಲು ಬಯಸುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ: 8296615560 / 7975078498 www.kaushalmanipal.com















