ಮಣಿಪಾಲ MSDC-Orane International School of Beauty & Wellness ವತಿಯಿಂದ ಆರ್ಗ್ಯಾನಿಕ್ ಫೇಸ್‌ಪ್ಯಾಕ್ ಸ್ಪರ್ಧೆ: ಕಾದಿದೆ ಆಕರ್ಷಕ ಬಹುಮಾನ! ಬೇಗ ನೋಂದಣಿ ಮಾಡಿಕೊಳ್ಳಿ

ಮಣಿಪಾಲ: ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ (MSDC) ಹಾಗೂ Orane International School of Beauty & Wellness ವತಿಯಿಂದ ‘ಕೌಶಲ 2026 – ದಿ ಸ್ಕಿಲ್ ಫೆಸ್ಟ್’ ಆಯೋಜಿಸಲಾಗಿದೆ. ಇದರ ಅಂಗವಾಗಿ ‘ಆರ್ಗ್ಯಾನಿಕ್ ಫೇಸ್‌ಪ್ಯಾಕ್/ಮಾಸ್ಕ್ ಅಪ್ಲಿಕೇಶನ್ ಸ್ಪರ್ಧೆ’ ನಡೆಯಲಿದೆ.

ಸೆಪ್ಟೆಂಬರ್‌ 19ರಂದು ನಡೆಯಲಿರುವ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಹಾಗೂ ಆಸಕ್ತರು ತಮ್ಮ ಪ್ರತಿಭೆ, ಸೃಜನಶೀಲತೆ ಮತ್ತು ವೃತ್ತಿಪರ ಕೌಶಲವನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು. ವಿಜೇತರಿಗೆ ಬಹುಮಾನಗಳು ಹಾಗೂ ಗಿಫ್ಟ್‌ ವೋಚರ್‌ಗಳನ್ನು ನೀಡಲಾಗುತ್ತದೆ.

ಎರಡು ವಿಭಾಗಗಳಲ್ಲಿ ಸ್ಪರ್ಧೆ

ಸ್ಪರ್ಧೆಯನ್ನು ಎರಡು ವಿಭಾಗಗಳಲ್ಲಿ ಆಯೋಜಿಸಲಾಗಿದೆ. ಕ್ಯಾಟಗರಿ-1ರಲ್ಲಿ PUC ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳು, ಕ್ಯಾಟಗರಿ-2ರಲ್ಲಿ 16 ವರ್ಷ ಮೇಲ್ಪಟ್ಟವರು ಭಾಗವಹಿಸಬಹುದು.

ಸ್ಪರ್ಧೆಗೆ ಪ್ರತಿ ಸ್ಪರ್ಧಿಯೂ ಒಬ್ಬ ವಾಲಂಟಿಯರ್‌ ಮಾಡೆಲ್‌ ಅನ್ನು ಕರೆತರಬೇಕು. ಅಗತ್ಯವಿರುವ ಆರ್ಗ್ಯಾನಿಕ್‌ ಪದಾರ್ಥಗಳು, ಉತ್ಪನ್ನಗಳು ಹಾಗೂ ಇತರೆ ಉಪಕರಣಗಳನ್ನು ಸ್ಪರ್ಧಿಗಳೇ ತರಬೇಕು. ಮುಖದ ಸ್ವಚ್ಛತೆ, ಫೇಸ್‌ಪ್ಯಾಕ್‌ ತಯಾರಿ ಮತ್ತು ಸರಿಯಾದ ರೀತಿಯಲ್ಲಿ ಅನ್ವಯಿಸುವ ವಿಧಾನ ಸೇರಿದಂತೆ ವಿವಿಧ ಅಂಶಗಳನ್ನು ತೀರ್ಪುಗಾರರು ಪರಿಗಣಿಸಲಿದ್ದಾರೆ.

ಸ್ಪರ್ಧೆಯ ಒಟ್ಟು ಅವಧಿ 40 ನಿಮಿಷಗಳಾಗಿದ್ದು, ಉತ್ಪನ್ನದ ಜ್ಞಾನ, ಅಪ್ಲಿಕೇಶನ್‌ ತಂತ್ರ, ಸ್ವಚ್ಛತೆ, ಕಾರ್ಯಸ್ಥಳದ ವ್ಯವಸ್ಥೆ, ಸಮಯ ನಿರ್ವಹಣೆ ಹಾಗೂ ವೃತ್ತಿಪರತೆ ಆಧಾರದ ಮೇಲೆ ಮೌಲ್ಯಮಾಪನ ನಡೆಯಲಿದೆ.

₹100 ಪ್ರವೇಶ ಶುಲ್ಕ

ಸ್ಪರ್ಧೆಯಲ್ಲಿ ಭಾಗವಹಿಸಲು ₹100 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಶಾಲೆಗಳು ಹಾಗೂ ವಿಶ್ವವಿದ್ಯಾಲಯಗಳು ತಮ್ಮ ಅತ್ಯುತ್ತಮ ತಂಡಗಳನ್ನು ನಾಮನಿರ್ದೇಶನ ಮಾಡಬಹುದಾಗಿದ್ದು, ವೈಯಕ್ತಿಕ ಸ್ಪರ್ಧಿಗಳೂ ಸ್ವತಂತ್ರವಾಗಿ ನೋಂದಣಿ ಮಾಡಿಕೊಳ್ಳಬಹುದು.

ನೋಂದಣಿಗೆ ಕೊನೆಯ ದಿನ ಸೆಪ್ಟೆಂಬರ್‌ 8, 2026 ಆಗಿದ್ದು, ಸ್ಪರ್ಧೆಯು ಸೆಪ್ಟೆಂಬರ್‌ 19, 2026ರಂದು ಮಣಿಪಾಲದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 8123165068 ಸಂಪರ್ಕಿಸಬಹುದು. ಕಾರ್ಯಕ್ರಮವು MSDC Building, Dr. T.M.A. Pai Polytechnic ಆವರಣದಲ್ಲಿ ನಡೆಯಲಿದೆ.