ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿ ಕೆಲ ದೂರ ಕ್ರಮಿಸಿದ ಬಳಿ ಪೈಲಟ್-ಇನ್-ಕಮಾಂಡ್ ಅಸ್ವಸ್ಥರಾಗಿದ್ದರು.
ಓಮನ್ (ಸೆ.03): ದೋಹಾದಿಂದ ಬೆಂಗಳೂರಿಗೆ (Bengaluru) ಬರುತ್ತಿದ್ದ ಇಂಡಿಗೋ 6E 1302 ವಿಮಾನ ಹಾರಾಟ ಮಾಡುತ್ತಿರುವಾಗಲೇ ಪೈಲಟ್‌ಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಪೈಲಟ್ ದಿಢೀರ್ ಅಸ್ವಸ್ಥಗೊಂಡಿದ್ದು, ಎಚ್ಚತ್ತೆ ಟೀಮ್ ಕೂಡಲೇ ವಿಮಾನವನ್ನು ಮಸ್ಕತ್‌ಗೆ ತಿರುಗಿಸಿ (Muscat) ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ವರದಿಯಾಗಿದೆ.
ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿ ಕೆಲ ದೂರ ಕ್ರಮಿಸಿದ ಬಳಿ ಪೈಲಟ್-ಇನ್-ಕಮಾಂಡ್ ಅಸ್ವಸ್ಥರಾಗಿದ್ದರು. ಅವರಿಗೆ ತಕ್ಷಣ ವೈದ್ಯಕೀಯ ಆರೈಕೆಯ ಅಗತ್ಯವಿತ್ತು. ಕೂಡಲೇ ಮಸ್ಕತ್‌ಗೆ ಸುರಕ್ಷಿತವಾಗಿ ವಿಮಾನವನ್ನ ಕಳುಹಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೈಲಟ್ ಆಸ್ಪತ್ರೆ ದಾಖಲು
ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ನಿಲ್ದಾಣದಲ್ಲಿ ಪೈಲಟ್ ಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಿ, ನಂತರ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಆಗಿದೆ.
ಪ್ರಯಾಣಿಕರಿಗೆ ಮತ್ತೊಂದು ವಿಮಾನದ ವ್ಯವಸ್ಥೆ
ಇಂಡಿಗೋ 6E 1302 ವಿಮಾನ ದೋಹಾದಿಂದ ಬೆಂಗಳೂರಿಗೆ ಬರ್ತಿತ್ತಿ. ಇನ್ನು ಪ್ರಯಾಣಿಕರನ್ನು ಬೆಂಗಳೂರಿಗೆ ಕಳುಹಿಸಲು ಇಂಡಿಗೋ ಪರ್ಯಾಯ ವಿಮಾನ ಮತ್ತು ಬೇರೆ ಸಿಬ್ಬಂದಿಯನ್ನು ವ್ಯವಸ್ಥೆ ಮಾಡಿದೆ. ಪ್ರಯಾಣಿಕರಿಗೆ ಉಪಹಾರ ಮತ್ತು ಅಗತ್ಯ ಸೌಲಭ್ಯ ಒದಗಿಸಲಾಗಿದೆ ಎಂದು ಇಂಡಿಗೋ ಸಂಸ್ಥೆ ತಿಳಿಸಿದೆ.















