Darshan: ದರ್ಶನ್​ಗೆ ಡಬಲ್ ಶಾಕ್! ದಾಸನಿಂದ ದೂರ ದೂರ ಅಂತಿರೋ ಡಿಗ್ಯಾಂಗ್, ಚಿತ್ರದುರ್ಗ ಜೈಲಿಗೆ ಶಿಫ್ಟ್

ದಾಸನ ಬಿಡುತ್ತಿಲ್ಲ ಸಂಕಷ್ಟ! ಮಾಫಿ ಸಾಕ್ಷಿ ಶಾಕ್ ನಂತರ ದರ್ಶನ್​ಗೆ ಈಗ ಡಬಲ್ ಶಾಕ್, ಅಷ್ಟಕ್ಕೂ ಆಗಿದ್ದೇನು

ಈಗಾಗಲೇ ಮಾಫಿ ಸಾಕ್ಷಿ (Approver) ಶಾಕ್​​ನಲ್ಲಿರುವ ದರ್ಶನ್​ಗೆ ಇನ್ನೊಂದು ಶಾಕ್ ಸಿಕ್ಕಿದೆ. ಚಿತ್ರದುರ್ಗದ  (Chitradurga) ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ  (Renukaswamy Case) ಸಂಬಂಧಿಸಿದಂತೆ ಈಗಾಗಲೇ ಸಮಸ್ಯೆಯಲ್ಲಿರುವ ದರ್ಶನ್​ಗೆ ಪ್ರದೋಷ್​ನ (Pradosh) ಮಾಫಿ ಸಾಕ್ಷಿ ಟ್ವಿಸ್ಟ್ ದೊಡ್ಡ ತಲೆನೋವಾಗಿದೆ. ಇನ್ನೇನು ಹೇಳಿಕೆ ದಾಖಲಿಸಬೇಕು ಎನ್ನುವಷ್ಟರಲ್ಲಿ ಹೇಗೋ ಹೈಕೋರ್ಟ್ ಮೊರೆ ಹೋಗಿ ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲು ಸದ್ಯ ಮುಂದೂಡಲಾಗಿದೆ. ಆದರೆ ದಾಸನಿಗೆ ಸಂಕಷ್ಟ ಮುಗಿಯುತ್ತಿಲ್ಲ

ದಾಸನ ಬಿಡುತ್ತಿಲ್ಲ ಸಮಸ್ಯೆ

ದರ್ಶನ್​ಗೆ ಯಾಕೋ ಸಮಸ್ಯೆಗಳೇ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ, ಒಂದೊಂದೇ ಚಾಲೆಂಜ್ ಎದುರಾಗುತ್ತಲೇ ಇದೆ. ಮಾಫಿ ಸಾಕ್ಷಿಗೆ ಡಿ ಗ್ಯಾಂಗ್ ಢವ ಢವ ಅಂತಿರುವಾಗಲೇ ನಟ ದರ್ಶನ್ ಗೆ ಮಾಫಿ ಸಾಕ್ಷಿ ಶಾಕ್ ನಡುವೆ ಮತ್ತೊಂದು ಶಾಕ್ ಸಿಕ್ಕಿದೆ.

ನಟ ದರ್ಶನ್​ನಿಂದ ಮತ್ತಿಬ್ಬರು ಆರೋಪಿಗಳು ದೂರ ದೂರ ಎನ್ನುವ ಹಾಗಾಗಿದೆ. ಚಿತ್ರದುರ್ಗ ಜಿಲ್ಲಾ ಜೈಲ್ಲಿಗೆ ವರ್ಗಾವಣೆ ಮಾಡುವಂತೆ ಕೋರ್ಟ್​ಗೆ ಇಬ್ಬರು ಮನವಿ ಮಾಡಿದ್ದಾರೆ.