ಉಡುಪಿ: ಮೂಲತಃ ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕು ಮುದ್ಗಲ್ ಗ್ರಾಮಾಂತರ ಮೆಗಳ ಪೇಟೆ ನಿವಾಸಿ ನಿಂಗಪ್ಪ (44) ಎಂಬ ವ್ಯಕ್ತಿಯು ಪ್ರಸ್ತುತ ಕೂಲಿ ಕೆಲಸ ಮಾಡಿಕೊಂಡು ವಾರಂಬಳ್ಳಿ ಗ್ರಾಮದ ಎಸ್.ಎಂ.ಎಸ್ ಶಾಲೆ ಬಳಿ ವಾಸಮಾಡಿಕೊಂಡಿದ್ದು, ಮೇ 24 ರಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ತನ್ನ ಹೆಂಡತಿಗೆ ಕರೆ ಮಾಡಿ ಮಾತನಾಡಿದವರು ನಂತರದಿoದ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿರುತ್ತಾರೆ.
5 ಅಡಿ 8 ಇಂಚು ಎತ್ತರ, ಎಣ್ಣೆಕಪ್ಪು ಮೈಬಣ್ಣ, ಸಣಕಲು ಶರೀರ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ ದೂ.ಸಂಖ್ಯೆ: 0820-2461044, 9480805453 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬ್ರಹ್ಮಾವರ ಪೊಲೀಸ್ ಠಾಣೆಯ ಉಪನಿರೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.















