ಕಾರ್ಕಳ: ದೇಶದ ರಾಜಕಾರಣಕ್ಕೆ ಕಾಂಗ್ರೆಸ್ ಅನಿವಾರ್ಯ. ಭಾರತದ ೭೦ ವರ್ಷಗಳ ಇತಿಹಾಸದಲ್ಲಿ ಕಾಂಗ್ರೆಸ್ ಹೊರತುಪಡಿಸಿ, ಅನ್ಯಪಕ್ಷಗಳ ಯಾವ ಸರಕಾರಗಳು ಅವಧಿ ಪೂರ್ಣಗೊಳಿಸಿಲ್ಲ, ಅವಧಿಪೂರ್ಣಗೊಳಿಸಿದ ವಾಜಪೇಯಿ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದಿಲ್ಲ ಎಂದು ಶಾಸಕ ಎಚ್. ಗೋಪಾಲ ಭಂಡಾರಿ ಹೇಳಿದರು.
ಪುರಸಭೆ ವ್ಯಾಪ್ತಿಯ ಕಾಳಿಕಾಂಬಾ ಪರಿಸರದಲ್ಲಿ ನಗರ ಕಾಂಗ್ರೆಸ್ ಆಯೋಜಿಸಿದ್ದ ಸುಭದ್ರ ಭಾರತಕ್ಕಾಗಿ ಶಕ್ತಿ ಸಂಘಟನೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಗರಾಧ್ಯಕ್ಷ ಮಧು ರಾಜ್ ಶೆಟ್ಟಿ ಮಾತನಾಡಿ, ರಾಹುಲ್ ಗಾಂಧಿ ಅವರ ಶಕ್ತಿ ಕಾರ್ಯಕ್ರಮ ಪಕ್ಷಕ್ಕೆ ಯಾಥಾರ್ಥದಲ್ಲಿ ಶಕ್ತಿ ತುಂಬುವ ಕಾರ್ಯಕ್ರಮವಾಗಿದೆ. ಯುವ ಕಾರ್ಯಕರ್ತರು ಈ ಸದಸ್ಯತ್ವ ನೊಂದಣಿಗಾಗಿ ಉತ್ಸುಕರಾಗಿದ್ದಾರೆ ಎಂದರು.
ಪುರಸಭಾ ಸದಸ್ಯ ಶುಭದ ರಾವ್ ಪ್ರಸ್ತಾವನೆಗೈದು, ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಮಾಜಿ ನಗರಾಧ್ಯಕ್ಷ ಸುಬಿತ್ ಕುಮಾರ್, ರಾಜ್ಯ ಹಿಂದುಳಿದ ವರ್ಗದ ಕಾರ್ಯದರ್ಶಿ ಪ್ರಭಾಕರ ಬಂಗೇರಾ, ಹಿಂದುಳಿದ ವರ್ಗದ ಅಧ್ಯಕ್ಷ ನವೀನ್ ದೇವಾಡಿಗ, ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಅಶ್ಪಕ್ ಅಹಮದ್, ಅಸ್ಲಾಂ, ಕಾನೂನು ಘಟಕ ಅಧ್ಯ ಕ್ಷ ರೆಹಮತುಲ್ಲಾ, ಸುನಿಲ್ ಕೋಟ್ಯಾನ್, ವೆಂಕಟ ರಾವ್, ನವೀನ್ ರಾವ್, ಉಪಸ್ಥಿತರಿದ್ದರು.