ಮಣಿಪಾಲ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ಕಚೇರಿ ಕೆಲಸಗಳನ್ನು ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸುವ ಕೌಶಲ್ಯಗಳನ್ನು ಕಲಿಯಲು ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದ ‘Office Automation Using AI Tools’ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ತರಬೇತಿಯಲ್ಲಿ MS Word, MS Excel ಮತ್ತು MS PowerPoint ಬಳಕೆಯ ಜೊತೆಗೆ ವಿವಿಧ AI ಪರಿಕರಗಳ ಸಮನ್ವಯ, ಡೇಟಾ ವಿಶ್ಲೇಷಣೆ ಹಾಗೂ ಒಳನೋಟಗಳ ಸೃಷ್ಟಿ, ಡಾಕ್ಯುಮೆಂಟ್ ವಿನ್ಯಾಸ, ಪ್ರೆಸೆಂಟೇಶನ್ ಸುಧಾರಣೆ, ಸಂವಹನ ಮತ್ತು ಪ್ರಸ್ತುತಿ ಕೌಶಲ್ಯಗಳನ್ನು ಕಲಿಸಲಾಗುತ್ತದೆ.
ಉದ್ಯೋಗಾವಕಾಶಗಳಿಗೆ ಸಹಕಾರಿ
ತರಬೇತಿ ಪೂರ್ಣಗೊಳಿಸಿದವರಿಗೆ ಆಡಳಿತ ಸಹಾಯಕ, ಡಾಕ್ಯುಮೆಂಟೇಶನ್ ಎಕ್ಸಿಕ್ಯೂಟಿವ್, ಡೇಟಾ ಎಂಟ್ರಿ ಆಪರೇಟರ್, ಗ್ರಾಹಕ ಸೇವಾ ಪ್ರತಿನಿಧಿ, ಆಫೀಸ್ ಎಕ್ಸಿಕ್ಯೂಟಿವ್ ಹಾಗೂ MIS ಎಕ್ಸಿಕ್ಯೂಟಿವ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವೃತ್ತಿ ಅವಕಾಶಗಳಿಗೆ ಅಗತ್ಯವಾದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಹಕಾರಿಯಾಗಲಿದೆ.
30 ಗಂಟೆಗಳ ತರಬೇತಿ ಅವಧಿಯನ್ನು ಪ್ರತಿದಿನ 2 ಗಂಟೆಗಳಂತೆ ನಡೆಸಲಾಗುತ್ತದೆ. 10ನೇ ತರಗತಿ, 12ನೇ ತರಗತಿ, ಡಿಪ್ಲೊಮಾ, ಪದವಿ ವಿದ್ಯಾರ್ಥಿಗಳು ಹಾಗೂ ಉದ್ಯೋಗದಲ್ಲಿರುವ ವೃತ್ತಿಪರರು ತರಬೇತಿಗೆ ಅರ್ಹರಾಗಿದ್ದಾರೆ.
ತರಬೇತಿಗೆ ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ +91 81231 65069 ಸಂಪರ್ಕಿಸಬಹುದು.
ವೆಬ್ಸೈಟ್: www.msdckskills.org
ಇ-ಮೇಲ್: [email protected]















