ಸಿದ್ಧಿ ಕ್ರಿಯೇಟಿವ್ ಸ್ಕಿಲ್ಸ್ ಅಕಾಡೆಮಿಯಲ್ಲಿ ಆಟೀಡೊಂಜಿ ದಿನಾಚರಣೆ

ಉಡುಪಿ, ಆಗಸ್ಟ್: ಸಿದ್ಧಿ ಕ್ರಿಯೇಟಿವ್ ಸ್ಕಿಲ್ಸ್ ಅಕಾಡೆಮಿಯಲ್ಲಿ ಸೋಮವಾರ ಆಟೀಡೊಂಜಿ ದಿನವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಅಕಾಡೆಮಿಯ ಹಳೆಯ ಹಾಗೂ ಪ್ರಸ್ತುತ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ತಮ್ಮ ಮನೆಗಳಿಂದಲೇ ಶುಚಿ ಮತ್ತು ರುಚಿಯಾಗಿ ತಯಾರಿಸಿದ 39 ಬಗೆಯ ಸಾಂಪ್ರದಾಯಿಕ ಆಟಿ ತಿಂಗಳ ಖಾದ್ಯಗಳನ್ನು ತಂದು ಎಲ್ಲರೊಂದಿಗೆ ಹಂಚಿಕೊಂಡು ಸವಿದರು.
ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಶುಭ ಹಾರೈಸಿದರು. ವಿದ್ಯಾರ್ಥಿಗಳು ಆಗಮಿಸಿದ ಅತಿಥಿಗಳು ಹಾಗೂ ಸಹಪಾಠಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಆಟಿ ತಿಂಗಳ ಸಾಂಪ್ರದಾಯಿಕತೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಹುಲಿ–ಕುರಿ, ಕುಂಟೆಬಿಲ್ಲೆ ಸೇರಿದಂತೆ ವಿವಿಧ ಸಾಂಪ್ರದಾಯಿಕ ಆಟಗಳನ್ನು ಆಯೋಜಿಸಲಾಯಿತು. ಹಾಡು, ವಿವಿಧ ಮನರಂಜನಾ ಆಟಗಳು ಹಾಗೂ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಭಾಗವಹಿಸಿದವರಿಗೆ ಅಭಿನಂದನಾ ಪತ್ರದೊಂದಿಗೆ ಉಡುಗೊರೆಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಸಂದರ್ಭದಲ್ಲಿ ಅಕಾಡೆಮಿಯಲ್ಲಿ ಆಗಸ್ಟ್ 15 ಮತ್ತು 16ರಂದು ನಡೆಯಲಿರುವ Saree Box Folding, Pre-Pleating & Draping Workshop ಕುರಿತು ವಿದ್ಯಾರ್ಥಿಗಳಿಗೆ ಹಾಗೂ ಅತಿಥಿಗಳಿಗೆ ಮಾಹಿತಿ ನೀಡಲಾಯಿತು.
ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆ ಹಾಗೂ ಎಲ್ಲರ ಸಹಕಾರದಿಂದ ಆಟೀಡೊಂಜಿ ದಿನಾಚರಣೆಯು ಯಶಸ್ವಿಯಾಗಿ ನೆರವೇರಿತು.