Dam Water Level: ಕಾವೇರಿ ಹಾಗೂ ಕೃಷ್ಣಾ ನದಿ ಪಾತ್ರದ ಡ್ಯಾಮ್‍ಗಳ ಪ್ರಸ್ತುತ ನೀರಿನ ಮಟ್ಟದ ಸಂಪೂರ್ಣ ವಿವರ

ಬೆಂಗಳೂರು: ಕರ್ನಾಟಕದಲ್ಲಿ (Karnataka) ಮುಂಗಾರು ಮಳೆಯ (Rain) ಅಬ್ಬರ ಮುಂದುವರಿದಿದ್ದು, ರಾಜ್ಯದ ಪ್ರಮುಖ ಜಲಾಶಯಗಳು (Reservoirs) ನೀರಿನಿಂದ ಕಳಕಳಿಸುತ್ತಿವೆ. ಕೆಆರ್‌ಎಸ್ (KRS), ಕಬಿನಿ (Kabini), ಆಲಮಟ್ಟಿ ಸೇರಿದಂತೆ ಪ್ರಮುಖ ಅಣೆಕಟ್ಟುಗಳಿಗೆ ಒಳಹರಿವು ಹೆಚ್ಚಾಗಿದ್ದು, ರೈತರ (Farmer) ಮೊಗದಲ್ಲಿ ಮಂದಹಾಸ ಮೂಡಿಸಿದೆ. ಯಾವ ಜಲಾಶಯದಲ್ಲಿ ಎಷ್ಟಿದೆ ನೀರು? ಇಲ್ಲಿದೆ ಸಂಪೂರ್ಣ ವರದಿ.

ಕಾವೇರಿ ನದಿ ಪಾತ್ರದ ಜಲಾಶಯಗಳ ಕಥೆ ಏನು?

ಹಾರಂಗಿ ಅಣೆಕಟ್ಟು: ಗರಿಷ್ಠ ಮಟ್ಟ 2859 ಅಡಿಗಳಂದರೆ, ಪ್ರಸ್ತುತ 2858.28 ಅಡಿಗಳಿಗೆ ತಲುಪಿದೆ. ಜಲಾಶಯವು ಶೇ. 97.12 ರಷ್ಟು ಭರ್ತಿಯಾಗಿದ್ದು, 8.256 ಟಿಎಂಸಿ ನೀರು ಸಂಗ್ರಹವಿದೆ. ಒಳಹರಿವು 5626 ಕ್ಯೂಸೆಕ್‍ಗಳಷ್ಟಿದೆ.

ಹೇಮಾವತಿ ಅಣೆಕಟ್ಟು: 2922 ಅಡಿ ಗರಿಷ್ಠ ಮಟ್ಟ ಹೊಂದಿರುವ ಇಲ್ಲಿ, ಪ್ರಸ್ತುತ 2914.35 ಅಡಿ ನೀರಿದೆ. ಶೇ. 81.22 ರಷ್ಟು ಭರ್ತಿಯಾಗಿದ್ದು, ಒಟ್ಟು 30.135 ಟಿಎಂಸಿ ಸಂಗ್ರಹವಿದೆ.