ಆಗಸ್ಟ್ -ಸೆಪ್ಟಂಬರ್ ಮಾಹೆಯ ಪಡಿತರ ಒಂದೇ ಬಾರಿಗೆ ವಿತರಣೆ: ಪ್ರತ್ಯೇಕ ಬಯೋಮೆಟ್ರಿಕ್ ಕಡ್ಡಾಯ

ಉಡುಪಿ: ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಅಂತ್ಯೋದಯ ಮತ್ತು ಆದ್ಯತಾ (ಬಿ.ಪಿ.ಎಲ್.) ಪಡಿತರ ಚೀಟಿದಾರರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಪ್ರಸ್ತುತ ಆಗಸ್ಟ್ – 2026 ರ ಮಾಹೆಯಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಪಡಿತರವನ್ನು ಒಂದೇ ಬಾರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲಾಗುವುದು.

ಪಡಿತರ ಚೀಟಿದಾರರು ಎರಡು ತಿಂಗಳ ಧಾನ್ಯವನ್ನು ಪಡೆಯಲು ತಾಂತ್ರಿಕ ದಾಖಲೀಕರಣಕ್ಕಾಗಿ 2 ಬಾರಿ ಪ್ರತ್ಯೇಕವಾಗಿ ಬಯೋ ಮೆಟ್ರಿಕ್ ನೀಡುವುದು ಕಡ್ಡಾಯವಾಗಿರುತ್ತದೆ.

ಈ ಸಂಬoಧ ಅಂತ್ಯೋದಯ ಪ್ರತಿ ಪಡಿತರ ಚೀಟಿಗೆ 35 ಕೆ.ಜಿ + 35 ಕೆ.ಜಿ ಒಟ್ಟು 70 ಕೆ.ಜಿ ಅಕ್ಕಿ ಮತ್ತು ಆದ್ಯತಾ (ಬಿ,.ಪಿ.ಎಲ್) ಪಡಿತರ ಚೀಟಿಯ ಕೇಂದ್ರ ಪಡಿತರ ಚೀಟಿ ಪ್ರತಿ ಸದಸ್ಯರಿಗೆ 5 ಕೆ.ಜಿ + 5 ಕೆ.ಜಿ ಒಟ್ಟು 10 ಕೆ.ಜಿ ಅಕ್ಕಿಯನ್ನು ಮತ್ತು ಆದ್ಯತಾ (ಬಿ.ಪಿ.ಎಲ್) ಪಡಿತರ ಚೀಟಿಯ ರಾಜ್ಯ ಪಡಿತರ ಚೀಟಿ ಪ್ರತಿ ಸದಸ್ಯರಿಗೆ 5 ಕೆ.ಜಿ + 5 ಕೆ.ಜಿ ಒಟ್ಟು 10 ಕೆ.ಜಿ ಅಕ್ಕಿಯು ವಿತರಣೆಯಾಗಲಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.