ಮಣಿಪಾಲದ MSDCಯಲ್ಲಿ PCB Design & Fabrication ತರಬೇತಿ: ಈ ತಿಂಗಳಿನಿಂದಲೇ ಹೊಸ ಬ್ಯಾಚ್ ಶುರು, ಈ ಅವಕಾಶ ಮಿಸ್ ಮಾಡಿಕೊಳ್ಬೇಡಿ

ಮಣಿಪಾಲ: ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ವಿಸ್ತರಿಸುವ ಉದ್ದೇಶದಿಂದ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದ PCB Design & Fabrication Training ಕೋರ್ಸ್ಗೆ ಪ್ರವೇಶಾತಿ ಆರಂಭಗೊಂಡಿದೆ.

ಎರಡು ವಾರಗಳ (20 ಗಂಟೆಗಳ) ಅವಧಿಯ ಈ ತರಬೇತಿ ಕಾರ್ಯಕ್ರಮವು KiCad, FlatCAM ಹಾಗೂ CNC ತಂತ್ರಜ್ಞಾನ ಬಳಸಿಕೊಂಡು PCB ವಿನ್ಯಾಸದಿಂದ ತಯಾರಿಕೆವರೆಗೆ ಸಂಪೂರ್ಣ ಪ್ರಾಯೋಗಿಕ ತರಬೇತಿಯನ್ನು ನೀಡಲಿದೆ.

ಆಗಸ್ಟ್ 2026ರಿಂದ ಹೊಸ ಬ್ಯಾಚ್ ಆರಂಭವಾಗಲಿದ್ದು, ಸೀಮಿತ ಸೀಟುಗಳಿರುವುದರಿಂದ ಆಸಕ್ತ ಅಭ್ಯರ್ಥಿಗಳು ಶೀಘ್ರದಲ್ಲೇ ನೋಂದಣಿ ಮಾಡಿಕೊಳ್ಳುವಂತೆ ಸಂಸ್ಥೆ ತಿಳಿಸಿದೆ.

ಈ ಕೋರ್ಸ್ಗೆ ITI, ಡಿಪ್ಲೊಮಾ, ಎಂಜಿನಿಯರಿಂಗ್ ಹಾಗೂ ವಿಜ್ಞಾನ ವಿಭಾಗದ ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ತರಬೇತಿ ವೇಳೆ PCB ಲೇಔಟ್ ವಿನ್ಯಾಸ, CNC ಯಂತ್ರಗಳ ಮೂಲಕ PCB ಎನ್ಗ್ರೇವಿಂಗ್ ಮತ್ತು ಮಿಲ್ಲಿಂಗ್ ಸೇರಿದಂತೆ ಕೈಗಾರಿಕಾ ಅಗತ್ಯಗಳಿಗೆ ಅನುಗುಣವಾದ ಕೌಶಲ್ಯಗಳನ್ನು ಕಲಿಸಿಕೊಡಲಾಗುತ್ತದೆ.

ಕೋರ್ಸ್ ಪೂರ್ಣಗೊಳಿಸಿದವರಿಗೆ PCB Fabrication Supervisor, PCB Design Technician, Electronics Manufacturing Technician ಹಾಗೂ Technical Trainer ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಉದ್ಯೋಗಾವಕಾಶಗಳು ಲಭ್ಯವಾಗುವ ನಿರೀಕ್ಷೆಯಿದೆ.

ಹೆಚ್ಚಿನ ಮಾಹಿತಿಗಾಗಿ 81231 65069 / 73497 80582 ಸಂಖ್ಯೆಗೆ ಸಂಪರ್ಕಿಸಬಹುದು. ತರಬೇತಿ MSDC Building, ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಕ್ಯಾಂಪಸ್, ಈಶ್ವರನಗರ, ಮಣಿಪಾಲದಲ್ಲಿ ನಡೆಯಲಿದೆ.