ಸಚಿವ ಸ್ಥಾನ ವಂಚಿತ ನಾಯಕರ ಆಕ್ರೋಶ – 15ಕ್ಕೂ ಹೆಚ್ಚು ಶಾಸಕರಿಗೆ ಅಸಮಾಧಾನ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ (Cabinet Expansion) ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ(Congress) ಅಸಮಾಧಾನ ಆಸ್ಫೋಟಗೊಂಡಿದ್ದು ಶಾಸಕರ ಆಕ್ರೋಶ ಭುಗಿಲೆದ್ದಿದೆ. ಡಿಕೆ ಶಿವಕುಮಾರ್‌ (DK Shivakumar) ಸಂಪುಟದಲ್ಲಿ ನಾವು ಸಚಿವಗುತ್ತೇವೆ ಎಂದುಕೊಂಡಿದ್ದ ಶಾಸಕರಿಗೆ ದೆಹಲಿಯ ಹೈಕಮಾಂಡ್‌ ನಾಯಕರು ಶಾಕ್ ಕೊಟ್ಟಿದ್ದಾರೆ. ಹೀಗಾಗಿ ಅಸಮಾಧಾನಿತ ಶಾಸಕರು ರಾಜೀನಾಮೆ ಪಥ ತುಳಿದಿದ್ದಾರೆ.

ಈಗಾಗಲೇ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಬೇಳೂರು ಗೋಪಾಲಕೃಷ್ಣ ಸಹ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಹಲವು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ. ಬಾಕಿ ಇದ್ದ 20 ಸಚಿವ ಸ್ಥಾನಗಳ ಮೇಲೆ ದುಪ್ಪಟ್ಟು ಶಾಸಕರು ಕಣ್ಣಿಟ್ಟಿದ್ದರು. ಆದರೆ ಈಗ ನಿರೀಕ್ಷೆಯಂತೆ ಸಚಿವಾಕಾಂಕ್ಷಿಗಳ ಅಸಮಾಧಾನ ಹೊರ ಹಾಕಿದ್ದಾರೆ.