ಉಡುಪಿ ಜಿಲ್ಲಾ ಬೇಕರಿ ಸಂಘದ ದಶಮಾನೋತ್ಸವದ ಲೋಗೊ ಬಿಡುಗಡೆ

ಉಡುಪಿ: ಉಡುಪಿ ಜಿಲ್ಲಾ ಬೇಕರಿ ಹಾಗೂ ಖಾದ್ಯ ತಿನಿಸುಗಳ ತಯಾರಕರು ಮತ್ತು ಮಾರಾಟಗಾರರ ಸಂಘದ ದಶಮಾನೋತ್ಸವ ಹಾಗೂ ನವೆಂಬರ್‌ನಲ್ಲಿ ಆಯೋಜಿಸಿರುವ ಆಹಾರ ಉದ್ಯಮ ಮೇಳದ ಲೋಗೊ ಬಿಡುಗಡೆ ಸಮಾರಂಭ ಭಾನುವಾರ ಬ್ರಹ್ಮಾವರ ಸಿಟಿ ಸೆಂಟರ್‌ನ ಕುಂಕುಮ್ ಸಭಾಂಗಣದಲ್ಲಿ ನಡೆಯಿತು.

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಸಂಘದ ಲೋಗೊ ಬಿಡುಗಡೆಗೊಳಿಸಿ ಮಾತನಾಡಿ, ಉಡುಪಿಯ ಸಿದ್ಧ ಆಹಾರ ಮತ್ತು ತಿಂಡಿ–ತಿನಿಸುಗಳು ವಿಶ್ವದಾದ್ಯಂತ ವಿಶೇಷ ಮನ್ನಣೆ ಪಡೆದಿವೆ. ಉಡುಪಿ ಹೋಟೆಲ್‌ಗಳ ಶುಚಿ ಮತ್ತು ರುಚಿಕರ ಆಹಾರಕ್ಕೆ ಎಲ್ಲೆಡೆ ಬೇಡಿಕೆ ಇದೆ.

ಈ ಭಾಗದ ಜನರು ಶ್ರಮಜೀವಿಗಳಾಗಿದ್ದು, ಎಲ್ಲಿಗೆ ಹೋದರೂ ತಮ್ಮ ಪರಿಶ್ರಮದಿಂದ ಯಶಸ್ಸು ಸಾಧಿಸುತ್ತಾರೆ. ಉಡುಪಿಯ ಬೇಕರಿ ಉತ್ಪನ್ನಗಳಿಗೂ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಮನ್ನಣೆ ಸಿಗಲಿ ಎಂದು ಹಾರೈಸಿದರು.

ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಇಂಡಿಯನ್ ಬೇಕರ್ ಫೆಡರೇಶನ್‌ನ ಲೋಗೊ ಬಿಡುಗಡೆಗೊಳಿಸಿ, ಸಾಂಪ್ರದಾಯಿಕ ಹಾಗೂ ಆರೋಗ್ಯಕರ ಆಹಾರ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು. ಗುಣಮಟ್ಟ ಮತ್ತು ಶುಚಿತ್ವ ಕಾಪಾಡುವುದರ ಜೊತೆಗೆ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಗಮನ ಹರಿಸಬೇಕು. ಉದ್ಯಮಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘಟಿತರಾಗಿ ಕಾರ್ಯನಿರ್ವಹಿಸುವುದು ಶ್ಲಾಘನೀಯ ಎಂದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಸಂಘದ ದಶಮಾನೋತ್ಸವ ವರ್ಷದ ಲೋಗೊ ಬಿಡುಗಡೆ ಮಾಡಿದರು. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಕರ್ನಾಟಕ ಬೇಕರಿ ಹಾಗೂ ಸ್ವೀಟ್ಸ್ ಅಸೋಸಿಯೇಷನ್‌ನ ಲೋಗೊ ಅನಾವರಣಗೊಳಿಸಿದರು.

ಉದ್ಯಮಿಗಳಾದ ಪ್ರಸಾದ್ ರಾಜ್ ಕಾಂಚನ್, ಮುನಿಯಾಲು ಉದಯಕುಮಾರ್ ಶೆಟ್ಟಿ, ಸಂತೋಷ್ ವಾಗ್ಳೆ, ಬೆಳಪು ದೇವಿ ಪ್ರಸಾದ್ ಶೆಟ್ಟಿ, ಮನೋಹರ ಶೆಟ್ಟಿ, ಕಾರ್ಮಿಕ ಸಂಘಟನೆಯ ರವಿ ಶೆಟ್ಟಿ ಬೈಂದೂರು, ಕೈಗಾರಿಕಾ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್ ಹಾಗೂ ಯೋಜನೆ ಮತ್ತು ಯುವಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು‌.

ಸಂಘದ ಗೌರವಾಧ್ಯಕ್ಷ ವಾಲ್ಟರ್ ಜೋಸೆಫ್ ಸಲ್ದಾನ, ಅಧ್ಯಕ್ಷ ವಿಶ್ವನಾಥ ಕುಲಾಲ್, ಪ್ರಧಾನ ಕಾರ್ಯದರ್ಶಿ ಸತ್ಯಪ್ರಸಾದ್ ಶೆಣೈ, ಕೋಶಾಧಿಕಾರಿ ಶಶಿಕಾಂತ್ ಜಿ. ನಾಯಕ್, ಬೇಕರಿ ಮತ್ತು ಖಾದ್ಯ ತಯಾರಕರು ಮತ್ತು ಮಾರಾಟಗಾರರ ಸಹಕಾರ ಸಂಘದ ಅಧ್ಯಕ್ಷ ಶ್ರೀಧರ್ ಪಿ.ಎಸ್., ಗೌರವ ಸಲಹೆಗಾರ ಸ್ಟ್ಯಾನ್ಲಿ ಹೆರಾಲ್ಡ್ ಡಿಸೋಜ, ಉಪಾಧ್ಯಕ್ಷರಾದ ಸುದೇವ ಶೆಟ್ಟಿ, ಕೆ.ಪಿ. ಶ್ರೀಶಾನ್, ಸಂಘಟನಾ ಕಾರ್ಯದರ್ಶಿ ದಿವಾಕರ್ ಸನಿಲ್, ಜೊತೆ ಕಾರ್ಯದರ್ಶಿಗಳಾದ ಗಣಪತಿ ಮರಕಾಲ, ಕೃಷ್ಣ ಪೂಜಾರಿ, ಸದಸ್ಯರಾದ ಅಮೃತ್ ಕುಮಾ‌ರ್ ತೌಳ, ದುರ್ಗಾ ಪ್ರಸಾದ್, ಸಂದೀಪ್, ಚಂದ್ರಶೇಖರ, ಕೃಷ್ಣ ನಾಯ್ಕ, ವಿಶ್ವನಾಥ ಜಿ., ಶಶಿಧರ ಗಾಣಿಗ, ರಿತೇಶ್ ಸುವರ್ಣ, ಹಸನಬ್ಬ, ಅಜಿತ್ ಶೆಟ್ಟಿ, ರಾಘವೇಂದ್ರ ಮಡಿಕುಳ, ಸಂತೋಷ್ ಕುಲಾಲ್, ವಿಶ್ವನಾಥ್ ಬಿ.ಎಸ್., ಸೋಮಶೇಖರ್ ಕೆ.ಎಸ್, ಸಂತೋಷ್ ಪೂಜಾರಿ, ಕೆ. ಮಂಜುನಾಥ ಕಾಮತ್, ನವೀನ್ ಶೆಟ್ಟಿ ಉಪಸ್ಥಿತರಿದ್ದರು